Monday, November 25, 2024

ರಶ್ಮಿಕಾ ಕುರಿತು ವೈರಲ್​ ಆದ `ಆ’ ವಿಡಿಯೋ ಫೇಕ್!

ಮುಂಬೈ: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ವೈರಲ್‌ ಆಗಿದ್ದು, ಬಿಸಿ ಬಿಸಿ ಚರ್ಚೆಯಲ್ಲಿದೆ.

ವೀಡಿಯೋದಲ್ಲಿ ರಶ್ಮಿಕಾ ಅವರ ಎದೆ ಭಾಗ ಕಾಣಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ಆದರೀಗ ಅದು ರಶ್ಮಿಕಾ ಅವರ ವಿಡಿಯೋ ಅಲ್ಲವೆಂಬ ಸತ್ಯ ಬಯಲಾಗಿದೆ. ಸೋಶಿಯಲ್‌ ಮೀಡಿಯಾ ಬಳಕೆದಾರರೊಬ್ಬರು ಮೂಲ ವೀಡಿಯೋವನ್ನ ಪತ್ತೆ ಮಾಡಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪರೀಕ್ಷೆಯಲ್ಲಿ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ: HDK

ಈ ವೀಡಿಯೋ ವಾಸ್ತವಾಂಶ ಬಯಲಾದ ಬಳಿಕ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ದೇಶದ ಐಟಿ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವೀಡಿಯೋ ಮತ್ತು ಇತರ ವಿಷಯಗಳನ್ನು ತೆಗೆದುಹಾಕುವಂತೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇದರೊಂದಿಗೆ ತಮ್ಮ ಪೋಸ್ಟ್‌ನಲ್ಲಿ, ಯಾವುದೇ ವೇದಿಕೆಯಲ್ಲಿ ತಪ್ಪು ಮಾಹಿತಿ ಪೋಸ್ಟ್‌ ಮಾಡಿದರೆ, ಅದನ್ನ 36 ಗಂಟೆಗಳ ಒಳಗೆ ತೆಗೆದುಹಾಕಬೇಕು. ಇಲ್ಲದಿದ್ದರೇ ನೊಂದ ವ್ಯಕ್ತಿ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬಹುದು ಎಂದು ಎಚ್ಚರಿಸಿದ್ದಾರೆ.

RELATED ARTICLES

Related Articles

TRENDING ARTICLES