ಬೆಂಗಳೂರು : ಪರೀಕ್ಷೆಗಾಗಿ ತಾಳಿ ತೆಗೆಸಿದವರು ನೀವು.. ತಾಳಿ ತೆಗೆಯೋದು ವಿಧವೆ ಮಾತ್ರ.. ನಿಮಗೆ ನಾಚಿಕೆ ಆಗಲ್ವಾ? ಇದು ಯಾವ ಸಂಸ್ಕೃತಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತವರೂರು ಕಲಬುರ್ಗಿಯಲ್ಲಿ ನಡೆದ ಘಟನೆ ವಿರುದ್ಧ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಮನೆಯಲ್ಲಿ ತಾಳಿ ತೆಗೆಸುತ್ತೀರಾ? ನಿಮ್ಮ ಮನೆಯಲ್ಲಿ ಹೀಗೆ ಮಾಡೋಕೆ ಆಗತ್ತಾ? ತಾಳಿ, ಉಂಗುರ ತೆಗೆಸಿದದವರ ಮೇಲೆ ಕ್ರಮ ಆಗಬೇಕು. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ತಾಳಿ ತೆಗೆಸಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಹೆಣ್ಣುಮಕ್ಕಳಿಗೆ ಅವಮಾನ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಯೋಜನೆಗಳಿಗೆ ಹಣ ನೀಡಲಿದೆ. ನಾವು ಎಲ್ಲೂ ಅನುದಾನ ನಿಲ್ಲಿಸಿಲ್ಲ. ರಾಜ್ಯ, ಕೇಂದ್ರದ ಷೇರಿನ ಹಣ ಕೊಡ್ತಿದ್ದೇವೆ. ವಿದ್ಯಾರ್ಥಿ ವೇತನದ ಸಮಸ್ಯೆಯಿಲ್ಲ. ಸ್ಕ್ಯೂಟಿನಿ ಮಾಡುವುದು ವಿಳಂಬವಾಗ್ತಿದೆ. 395 ಕೋಟಿ ರೂಪಾಯಿ ಹಣವನ್ನ ಇದಕ್ಕೆ ನೀಡಲಾಗ್ತಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? : ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ಹೃದಯ ವೈಶಾಲ್ಯತೆಗೆ ಆಭಾರಿ : ಹೆಚ್.ಡಿ ಕುಮಾರಸ್ವಾಮಿ
ಬಜೆಟ್ ಮೀರಿ ಗ್ಯಾರಂಟಿ ಕೊಡಲಾಗಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬಜೆಟ್ ಮೀರಿ ಗ್ಯಾರಂಟಿ ಕೊಡಲಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಸರ್ಕಾರಗಳೂ ಇದನ್ನೇ ಮಾಡಿವೆ. ಎಸ್ಸಿಪಿ ಹಣವನ್ನ ಬೇರೆಯದಕ್ಕೆ ಬಳಸಲಾಗಿದೆ. ಇನ್ನೂ 75 ವರ್ಷ ಆದರೂ ನಾವು ಹೀಗೆ ಇರ್ತೇವೆ. ಎಸ್ಸಿಪಿ ಹಣ ಬೇರೆಯದಕ್ಕೆ ಬಳಸಬಾರದು. ರಿಸ್ಟ್ರಿಕ್ಷನ್ ಇಲ್ಲದಕ್ಕೆ ಎಲ್ಲದಕ್ಕೆ ಕೊಡ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ಹರಿಹಾಯ್ದರು.