ಹಾಸನ : ಹಾಸನಾಂಬೆ ದೇವಿ ದರ್ಶನ ಪಡೆಯಲು 4ನೇ ದಿನವೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ಮುಂಜಾನೆ 5 ಗಂಟೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಇಂದು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 15ರಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಿದೆ.
ಇದನ್ನೂ ಓದಿ: ಮೂರನೇ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ : ಸಿಎಂ, ಡಿಸಿಎಂ, ಹೆಚ್ಡಿಕೆ ಭೇಟಿಗೆ ಡೇಟ್…
ಹಾಸನಾಂಬೆ ಜಾತ್ರಾಮಹೋತ್ಸವದ ಅಂಗವಾಗಿ ನಗರದ ಜನರಿಗೆ ಹೆಲಿಕಾಪ್ಟರ್ ಮೂಲಕ ಹಾರಾಡೋದಕ್ಕೆ ಹೆಲಿಟೂರಿಸಂ ವ್ಯವಸ್ಥೆಯನ್ನ ಕಲ್ಪಿಸಿದೆ, ಕಳೆದ ಎರಡು ದಿನಗಳಿಗಿಂತ ಹೆಚ್ಚಾಗಿ ಇಂದು ಜನರ ಹೆಲಿಕಾಪ್ಟರ್ ಅನುಭವನ್ನ ಪಡೆದುಕೊಂಡರು.
ಇನ್ನು ಹಾಸನಾಂಬೆಯ ಪವಾಡ ತಿಳಿದು ತಾಯಿಯನ್ನ ನೋಡೋದಕ್ಕೆ ಜನರು ಬಹಳ ಕುತೂಹಲದಿಂದ ಬರ್ತಿದ್ದಾರೆ.