Monday, December 23, 2024

ಯಾರಾದ್ರೂ ನನ್ನ ಪರ ಮಾತಾಡಿದ್ರೆ ನೋಟಿಸ್ ಕೊಡ್ತೀನಿ:ಡಿಕೆಶಿ

ಬೆಂಗಳೂರು: ಯಾರಾದರು ಶಾಸಕರು ನನ್ನ ಪರವಾಗಿ ಮಾತನಾಡಿದರೇ ನೋಟಿಸ್​ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.​

ನಾನೇ 5 ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ನಡುವೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಪರ ಬ್ಯಾಟ್ ಬೀಸಿದ್ದರು. ಒಂದೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು: ಲಕ್ಷಾಂತರ ಮೌಲ್ಯದ ಸೀರೆ ಕಳವು!

ಈ ಸಂಬಂಧ ಈಗ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಯಾರಾದ್ರೂ ಶಾಸಕರು ನನ್ನ ಪರವಾಗಿ ಮಾತನಾಡಿದ್ರೆ ನೋಟಿಸ್ ಇಶ್ಯೂ ಮಾಡ್ತೀನಿ ಎಂದು ಶಾಸಕರ ವಿರುದ್ಧ ಗರಂ ಆಗಿದ್ದಾರೆ. ಯಾರಾದರೂ ಶಾಸಕರು ನನ್ನ ಪರವಾಗಿ ಮಾತನಾಡಿದರೇ ನೋಟಿಸ್ ಇಶ್ಯೂ ಮಾಡ್ತೀನಿ. ಪಕ್ಷದಲ್ಲಿ ಒಂದು ಶಿಸ್ತು ಇರಬೇಕು. ನನಗೆ ಯಾವ ಶಾಸಕರ ಬೆಂಬಲನೂ ಬೇಡ, ಯಾವ ಶಾಸಕರೂ ಬೇಡ. ರಾಮನಗರ MLA ಇಕ್ಬಾಲ್ ಹುಸೇನ್​ಗೆ ನೋಟಿಸ್ ಕೊಡಬೇಕು ಎಂದು ಕೊಂಡಿದ್ದೀನಿ. ನನಗೆ ಯಾರ ರೆಕಮೆಂಡೇಶನ್ ಕೂಡ ಬೇಡ. ಐ ಡೋಂಟ್ ವಾಂಟ್ ಏನೀ ರೆಕಮೆಂಡೇಶನ್ ಎಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES