ನವದೆಹಲಿ : ಕಾವೇರಿ ನೀರು ವಿಚಾರ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೊಮ್ಮೆ ಬಿಗ್ ಶಾಕ್ ಎದುರಾಗಿದೆ. ಇಂದು ದೆಹಲಿಯಲ್ಲಿ CWMA ಸಭೆ ನಡೆದಿದ್ದು, CWRC ಶಿಫಾರಸನ್ನು CWMA ಎತ್ತಿ ಹಿಡಿದಿದೆ.
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸೂಚನೆ ನೀಡಲಾಗಿದೆ. 2,600 ಕ್ಯೂಸೆಕ್ ನೀರು ಬಿಡಲು CWMA ಸೂಚಿಸಿದೆ. ಒಟ್ಟು 13 ಸಾವಿರ ಕ್ಯೂಸೆಕ್ ನೀರು ಬಿಡಲು ತಮಿಳುನಾಡು ಒತ್ತಾಯ ಮಾಡಿತ್ತು. ಬರ ಎದುರಾದ ಕಾರಣ ನೀರು ಬಿಡಲು ಅಸಾಧ್ಯವೆಂದು ಕರ್ನಾಟಕ ವಾದ ಮಾಡಿತ್ತು. ಆದರೂ ಮತ್ತೆ ನೀರು ಬಿಡಲು CWMA ಆದೇಶಿಸಿದೆ.
ಸಭೆ ಬಳಿಕ ಮಾತನಾಡಿದ ದೆಹಲಿಯಲ್ಲಿ ಜಲ ಸಂಪನ್ಮೂಲ ಕಾರ್ಯದರ್ಶಿ ರಾಕೇಶ್ ಸಿಂಗ್, ಇಂದು CWMA ಸಭೆ ಇತ್ತು. CWRC ಸಭೆಯ ಶಿಫಾರಸನ್ನು CWMA ಎತ್ತಿ ಹಿಡಿದಿದೆ. ಇಂದು ಮೇಕೆದಾಟು ಯೋಜನೆ ಬಗ್ಗೆ ಪ್ರಾಥಮಿಕ ಚರ್ಚೆ ಆಗಿದೆ ಎಂದು ತಿಳಿಸಿದ್ದಾರೆ.
ನ.15ರ ವರೆಗೆ ನೀರು ಬಿಡಲು ಶಿಫಾರಸು
ಅಕ್ಟೋಬರ್ 30ರಂದು ನಡೆದಿದ್ದ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ 15 ದಿನ ಪ್ರತಿನಿತ್ಯ 2,600 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿಯು (CWRC) ಸೂಚಿಸಿತ್ತು. 1 ನವೆಂಬರ್ ರಿಂದ ನವೆಂಬರ್ 15ರ ವರೆಗೆ ನೀರು ಬಿಡಲು ಕರ್ನಾಟಕ ಸಾಮರ್ಥ್ಯವಿದೆ. ಮತ್ತೆ ನಿತ್ಯ 2,600 ಕ್ಯೂಸೆಕ್ ನೀರು ಬಿಡುವಂತೆ ಸಭೆಯಲ್ಲಿ CWRC ಶಿಫಾರಸ್ಸು ಮಾಡಿತ್ತು.