Thursday, December 19, 2024

ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಸದ್ದಿಲ್ಲದೇ D57 ಚಿತ್ರದ ಮುಹೂರ್ತ

ಬೆಂಗಳೂರು : ಸ್ಯಾಂಡಲ್​ವುಡ್ ಬಾಕ್ಸ್​ ಆಫೀಸ್ ಸುಲ್ತಾನ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇದು ಪಕ್ಕಾ ಸೆಲೆಬ್ರೇಷನ್ ಟೈಮ್.

ತಾರಕ್ ಚಿತ್ರದ ನಿರ್ದೇಶಕ ಪ್ರಕಾಶ್ ನಿರ್ದೇಶನದ ಹಾಗೂ ಡಿ ಬಾಸ್ ದರ್ಶನ್ ನಟಿಸುತ್ತಿರುವ ಹೊಸ ಸಿನಿಮಾ D-57 ಚಿತ್ರಕ್ಕೆ ಸದ್ದಿಲ್ಲದೇ ಇಂದು ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ.

ಸದ್ಯಕ್ಕೆ D-57 ಎಂದು ಈ ಸಿನಿಮಾಗೆ ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನಟ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಹರಿದಾಡಿದ್ದು, ಇದೀಗ ನಿಜವಾಗಿದೆ. D-57 ಚಿತ್ರದ ಮುಹೂರ್ತದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದಾಸನ ಫ್ಯಾನ್ಸ್​ಗೆ ತ್ರಿಬಲ್ ಧಮಾಕ

ನಟ ದರ್ಶನ್ ಅವರು ಕಾಟೇರ ಚಿತ್ರದ ಅಂತಿಮ ಹಂತದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅತಿಥಿ ಪಾತ್ರದಲ್ಲಿ ನಟಿಸಿರುವ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ಇದೇ ನವೆಂಬರ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಎರಡು ಸಿಹಿ ಸುದ್ದಿಯ ನಡುವೆಯೇ ಡಿ ಬಾಸ್ ತಮ್ಮ ಸೆಲೆಬ್ರೆಟಿಗಳಿಗೆ ಮತ್ತೊಂದು ಭರ್ಜರಿ ಗುಡ್​ ನ್ಯೂಸ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES