ಬೆಂಗಳೂರು : ರೆಕಾರ್ಡ್.. ರೆಕಾರ್ಡ್.. ರೆಕಾರ್ಡ್.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್! ಬಟ್, ರೆಕಾರ್ಡ್ ಲೈಕ್ಸ್ ಮೀ.. ಐ ಕಾಂಟ್ ಅವಾಯ್ಡ್.! ‘ವಿರಾಟ’ ರೂಪಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಉಡೀಸ್ ಆಗಿದೆ.
ಕೆಜಿಎಫ್ ಚಿತ್ರದ ಈ ಡೈಲಾಗ್ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ತುಂಬಾನೇ ಹೇಳಿಮಾಡಿಸಿದಂತಿದೆ. ಏಕೆಂದರೆ ವಿರಾಟ್ ಕೊಹ್ಲಿ ಆಡುವ ಪ್ರತಿ ಪಂದ್ಯದಲ್ಲೂ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ವಿಶ್ವಕಪ್-2023 ಟೂರ್ನಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಇದೀಗ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಏಷ್ಯಾದಲ್ಲೇ 8,000 ರನ್ ವೇಗವಾಗಿ ಪೂರ್ಣಗೊಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ (ಏಕದಿನ ಕ್ರಿಕೆಟ್) ಅತಿ ಹೆಚ್ಚು ಸಲ 1,000+ ರನ್ ಗಳಿಸಿದ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಒಟ್ಟು 8 ಬಾರಿ (2011-14, 2017-19, 2023*) ಹಾಗೂ ಸಚಿನ್ ತೆಂಡೂಲ್ಕರ್ 7 ಬಾರಿ (1994, 1996-98, 2000, 2003, 2007) ಈ ಸಾಧನೆ ಮಾಡಿದ್ದಾರೆ.
First player to slam 1⃣0⃣0⃣0⃣+ ODI runs in 8⃣ calendar years 👑#PlayBold #INDvSL #CWC23 #ViratKohli @imVkohli pic.twitter.com/U5GPt3sh2M
— Royal Challengers Bangalore (@RCBTweets) November 2, 2023