Sunday, September 29, 2024

ನಾನು ಮೋದಿಯಂತೆ ಅಲ್ಲ, ನಾನು ಹೇಳಿದ್ದನ್ನು ಮಾಡುತ್ತೇನೆ : ರಾಹುಲ್ ಗಾಂಧಿ

ತೆಲಂಗಾಣ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. ತೆಲಂಗಾಣ ನಾಗರ್​ಕರ್ನೂಲ್​ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿಯಂತೆ ಅಲ್ಲ.. ನಾನು ಹೇಳಿದ್ದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ವಿರುದ್ಧ ಕೇಂದ್ರ ಸರ್ಕಾರ ಒಟ್ಟು 24 ಪ್ರಕರಣಗಳನ್ನು ಹಾಕಿಸಿದೆ. ನನ್ನನ್ನು ಲೋಕಸಭಾ ಸದಸ್ಯತ್ವದಿಂದಲೂ ಉಚ್ಛಾಟನೆ ಮಾಡಿಸಲಾಗಿತ್ತು. ನಾನು ಸಂತೋಷದಿಂದಲೇ ನಿವಾಸವನ್ನು ಬಿಟ್ಟುಕೊಟ್ಟೆ. ಇಡೀ ಭಾರತ, ತೆಲಂಗಾಣವೇ ನನ್ನ ಮನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು. ಮೊದಲು ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯಲಿದ್ದಾರೆ. ಬಳಿಕ ಜನರಿಂದ ಲೂಟಿಮಾಡಿದ ಹಣದ ಲೆಕ್ಕವನ್ನು ನಾವು ಕೇಳುತ್ತೇವೆ. ಮುಖ್ಯಮಂತ್ರಿ ಲೂಟಿ ಮಾಡಿದ ಹಣವನ್ನು ನಿಮಗೆ ಮರಳಿ ಕೊಡಬೇಕು ಎಂದು ನಾನು ನಿಶ್ಚಿಯಿಸಿದ್ದೇನೆ. ನಾನು ನರೇಂದ್ರ ಮೋ ದಿಯಂತೆ ಅಲ್ಲ. ಹೇಳಿದ್ದನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

AIMIM ಅಭ್ಯರ್ಥಿಗಳು ಬಿಜೆಪಿ ಬೆಂಬಲಿಗರು

ಇದೇ ವೇಳೆ AIMIM ವಿರುದ್ಧವೂ ಟೀಕೆ ಮಾಡಿದ ರಾಹುಲ್​ ಗಾಂಧಿ, ಮಹಾರಾಷ್ಟ್ರ, ರಾಜಸ್ಥಾನ, ಅಸ್ಸಾಂ , ಉತ್ತರ ಪ್ರದೇಶ ಹೀಗೆ ಕಾಂಗ್ರೆಸ್ ಎಲ್ಲೆಲ್ಲಾ ಚುನಾವಣೆಗೆ ಸ್ಪರ್ಧೆ ಮಾಡುತ್ತದೆಯೋ, ಅಲ್ಲೆಲ್ಲಾ AIMIMನ ಅಭ್ಯರ್ಥಿ ಗಳು ಮ್ಯಾಜಿಕ್​ನಂತೆ ಪ್ರತ್ಯಕ್ಷವಾಗುತ್ತಾರೆ. ಎಲ್ಲಾ AIMIMನ ಅಭ್ಯರ್ಥಿಗಳು ಬಿಜೆಪಿಯ ಬೆಂಬಲಿಗರು ಎಂದು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES