ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಸಿಂಗಸಂದ್ರಲ್ಲಿರುವ ಎಸಿಎಸ್ ಲೇಔಟ್ ಅಪಾರ್ಟ್ಮೆಂಟ್ವೊಂದರ ಸೆಲ್ಲರ್ ಮತ್ತು ಮೊದಲ ಮಹಡಿಯಲ್ಲಿ ಓಡಾಡಿದ್ದು ಇಲ್ಲಿನ ಜನರಿಗೆ ಆಂತಕ ಉಂಟುಮಾಡಿದೆ.
ಅಕ್ಟೋಬರ್ 28ರ ಬೆಳಗಿನ ಜಾವ ಚಿರತೆಯೊಂದು ಓಡಾಡಿದ ದೃಶ್ಯ ನಿವಾಸಿಗಳಲ್ಲಿ ಭಯವನ್ನುಂಟು ಮಾಡಿದೆ. ವಿಷಯ ತಿಳಿದು ಚೀತಾ ಆಪರೇಷನ್ಗಿಳಿದಿರುವ ಅರಣ್ಯ ಇಲಾಖೆ ಡ್ರೋಣ್ ಮೂಲಕ ಚಿರತೆ ಪತ್ತೆ ಮಾಡುವ ಕೆಲಸ ಆರಂಭಿಸಿದ್ದಾರೆ.
ಇದನ್ನು ಓದಿ: ಸಾರಿಗೆ ನೌಕರರಿಗೆ ಸಿಹಿಸುದ್ದಿ ಕೊಟ್ಟ KSRTC!
ಸಿಂಗಸಂದ್ರದಲ್ಲಿರುವ ಆಪಾರ್ಟ್ ಮೆಂಟ್ಗಳ ನಡುವೆ ಸುಮಾರು ನಾಲ್ಕೂವರೆ ಎಕರೆಯಷ್ಟು ಅರಣ್ಯ ಪ್ರದೇಶವಿದ್ದು ಚಿರತೆ ಅಲ್ಲಿಂದಲೇ ಬಂದಿರಬಹುದು ಅಥವಾ ಅಲ್ಲೇ ಅಡಗಿರಬಹದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದರ ಜೊತೆಗೆ ಎಇಸಿಎಪ್ ಖಾಲಿ ಬಡಾವಣೆಯಲ್ಲಿ ನಾಲ್ಕು ಬೋನ್ಗಳನ್ನ ಅಳವಡಿಸಲಾಗಿದೆ. ಬೋನ್ನಲ್ಲಿ ಜೀವಂತ ಕೋಳಿಗಳನ್ನಿಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಿಎಫ್ಓ ರವೀಂದ್ರ ಹಾಗೂ ಆರ್ಎಫ್ಓ ಶಿವರಾತ್ರೇಶ್ವರ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.