Saturday, November 23, 2024

ನಾನು ಯಾರ ಮೇಲೆ ಸಿಟ್ಟಾಗಬೇಕು ಹೇಳಿ? : ಸತೀಶ್ ಜಾರಕಿಹೊಳಿ

ಕೊಪ್ಪಳ : ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಮನೆಯಲ್ಲಿ ಡಿನ್ನರ್ ಪೊಲಿಟಿಕ್ಸ್ ವಿಚಾರ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಊಟಕ್ಕೆ ಹೋಗೊದು ಸೇರೊದು ಸಹಜ ಪ್ರಕ್ರಿಯೆ. ನಾನು ಯಾರ ಮೇಲೆ ಸಿಟ್ಟಾಗಬೇಕು ಹೇಳಿ? ಎಂದು ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ವಿಚಾರದ ಬಗ್ಗೆ ಯಾವುದೇ ಚರ್ಚೆ ಇಲ್ಲ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿ ಸದ್ಯ ಸಿಎಂ ಇದಾರೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಕರ್ನಾಟಕದಲ್ಲಿ ಏಕನಾಥ್ ಶಿಂಧೆ ಎಂಬ ವಿಚಾರ ಕುರಿತು ಮಾತನಾಡಿ, ಆ ರೀತಿ ಯಾವುದು ಇಲ್ಲ, ಕಾಂಗ್ರೆಸ್ ಪಕ್ಷದಲ್ಲೇ ಇದೆ, ಇಲ್ಲಿ ಒಟ್ಟಾಗಿ ಇದ್ದೇವೆ. ಅಂತಹ ಪ್ರಶ್ನೆ ಉದ್ಭವವಾಗೋದೇ ಇಲ್ಲ. ನಿಮಗೆ ಹಾಗೆ ಅನಿಸಿರಬಹುದು, ನಮಗೆ ಹಾಗೆ ಅನಿಸಿಲ್ಲ. ಪರಮೇಶ್ವರ್ ಮನೆಗೆ ಊಟಕ್ಕೆ ಹೋಗಿದ್ದು ಅಷ್ಟೇ. ಅಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನಮ್ಮ ಆಂತರಿಕ ವಿಚಾರಗಳನ್ನು ಹೊರಗಡೆ ಹೇಳಬೇಡಿ ಅಂತ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಎಂದು ಡಿಕೆಶಿಯತ್ತ ಬಾಣ ಬಿಟ್ಟಿದ್ದಾರೆ.

ಉತ್ತರ ಕೊಡೋದು ನಮ್ಮ ಹೈಕಮಾಂಡ್

ಎರಡುವರೆ ವರ್ಷ ಮಾತ್ರ ಸಿಎಂ ಸಿದ್ದರಾಮಯ್ಯ ಅವಧಿ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ಆಗಲ್ಲ. ಈ ಹಂತದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಉತ್ತರ ಕೊಡೋಕೆ ಆಗಲ್ಲ. ಅದರ ಬಗ್ಗೆ ಉತ್ತರ ಕೊಡೋದು ನಮ್ಮ ಹೈಕಮಾಂಡ್, ನಮಗೆ ಅಧಿಕಾರ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES