ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಲ್ಲಿದ್ರು ಅಂತ ಎಲ್ಲರಿಗೂ ಗೊತ್ತಿರುವ ವಿಷಯ. ಕ್ರಿಕೆಟ್ ನೋಡೋಕೆ ಹೋಗಿದ್ದು ಕ್ರೀಡೆ ಬೆಂಬಲಿಸೋಕೆ. ಇವ್ರು ಯಾಕೆ ಅವಾಗ ಕ್ರಿಕೆಟ್ ಬೆಂಬಲಿಸಲಿಲ್ಲ? ಇವ್ರು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿದ್ರಲ್ಲಾ.. ಯಾಕಪ್ಪ ಇದ್ರು..? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ(ಕಾವೇರಿ ನಿವಾಸ)ಯನ್ನು ಅವರು ಕೇಳಿದಿದ್ರೆ ಕೊಡುತ್ತಿದ್ದೊ. ಯಡಿಯೂರಪ್ಪ ಇದ್ರಲ್ಲ.. ಅದಕ್ಕೆ ಏನ್ ಹೇಳ್ತಾರೆ? ಎಂದು ಪ್ರಶ್ನಿಸಿದರು.
ಸಚಿವ ಜಾರ್ಜ್ಗೆ ಹಂಚಿಕೆ ಆಗಿದ್ದು, ಜಾರ್ಜ್ ನನಗೆ ಕೊಟ್ಟಿದ್ರು. ಅದರಲ್ಲಿ ಯಾರ ಬೇಕಾದರೂ ಇರಬಹುದು. ಇವತ್ತಿನವರೆಗೆ ಡಿ.ಕೆ ಶಿವಕುಮಾರ್ ಸರ್ಕಾರ ಬೀಳಿಸಿದ ಅಂತಿದ್ರು. ಇವಾಗ ನನ್ನ ಬೀಳಿಸಿದ ಅಂತಿದ್ದಾರೆ. ಕುಣಿಯಲಾರದವ ನೆಲ ಡೊಂಕು ಅಂತ ಹೇಳ್ತಾರೆ. ಅವರ ಕೈಯಲ್ಲಿ ಸರ್ಕಾರ ಉಳಿಸಿಕೊಳ್ಳೋಕೆ ಆಗಿಲ್ಲ. ಇವಾಗ ನಮ್ಮ ಮೇಲೆ ಎಲ್ಲಾ ಹೇಳ್ತಾರೆ ಎಂದು ತಿರುಗೇಟು ಕೊಟ್ಟರು.
ಸಚಿವ ಸಂಪುಟ ಪುನಾರಚನೆ ಬಗ್ಗೆ ಏನಂದ್ರು?
ರಾಜ್ಯದ ಜನರಿಗೆ ದಸರಾ ಮಹೋತ್ಸವದ ಶುಭಾಶಯಗಳು. ನಾಳೆ ವಿಜಯದಶಮಿ, ಇವತ್ತು ಆಯುಧ ಪೂಜೆ. ಮೈಸೂರಿನಲ್ಲಿ ನಾಳೆ ಜಂಬೂ ಸವಾರಿ ನಡೆಯುತ್ತದೆ. ಜಂಬೂ ಸವಾರಿಗೆ ಎಲ್ಲಾ ಸಿದ್ದತೆಗಳು ಆಗಿದೆ. ಹೆಚ್.ಸಿ ಮಹಾದೇವಪ್ಪ ಇದರ ಜವಬ್ದಾರಿ ತಗೊಂಡು ಕೆಲಸ ಮಾಡಿದ್ದಾರೆ. ನಾಳೆ ಚಾಮುಂಡೇಶ್ವರಿ ಮೆರವಣಿಗೆ ಆಗುತ್ತದೆ. ಅದಕ್ಕೆ ನಾವು ಪುಷ್ಪಾರ್ಚನೆ ಮಾಡ್ತೀವಿ ಎಂದರು.
2.5 ವರ್ಷಗಳ ಬಳಿಕ ಸಂಪುಟ ಪುನಾರಚನೆಯ ಬಗ್ಗೆ ಶಾಸಕರ ಹೇಳಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಡದೆ ಹೊರಟ ಹೋದರು.