Friday, November 22, 2024

ಗಗನಕ್ಕೇರಿದ ಧಾನ್ಯಗಳ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ!

ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ನಾನಾ ಕೃಷಿ ಬೆಳೆಗಳಿಗೆ ಸಂಕಷ್ಟ ಎದುರಾಗಿದ್ದು, ದಿನದಿಂದ ದಿನಕ್ಕೆ ಧಾನ್ಯಗಳ ದರ ಗಗನಕ್ಕೇರುತ್ತಿದೆ. ಅದರಲ್ಲೂ ದಸರಾ ಹಬ್ಬಕ್ಕೆ ಎಲ್ಲೆಡೆ ದೇವರ ಉತ್ಸವಗಳು ನಡೆಯಲಿದ್ದು, ಅನ್ನದಾಸೋಹವೂ ಜೋರಾಗಿಯೇ ನಡೆಯುತ್ತದೆ. ಈ ವೇಳೆ ಅಕ್ಕಿ, ಬೇಳೆ ಸೇರಿದಂತೆ ಧಾನ್ಯಗಳ ಖರೀದಿಯೂ ಹೆಚ್ಚಾಗಿರುತ್ತದೆ.

ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಕಳೆದ ಎರಡು ತಿಂಗಳಿಂದೀಚೆಗೆ ಶೇ.30ರಷ್ಟು ಏರಿಕೆಯಾಗಿದೆ. ನಾಡಹಬ್ಬ ದಸರಾಗೆ ಧಾನ್ಯಗಳ ದರ ಏರಿಕೆಯ ಬಿಸಿ ತಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬೆಲೆಯಲ್ಲಿ ಶೇ.30 ರಷ್ಟು ಏರಿಕೆಯಾಗಿದೆ. ಕೆಜಿ ತೊಗರಿಬೇಳೆ ಸಗಟು ದರದಲ್ಲಿ160- 170 ರೂ. ಇದೆ. ಚಿಲ್ಲರೆ ಮಾರಾಟದಲ್ಲಿ 200 ರೂ. ಹಾಗೂ ಮೇಲ್ಪಟ್ಟು ಮಾರಾಟವಾಗುತ್ತಿದೆ.

ಇದನ್ನೂ ಓದಿ: ಇಂದು ಗಗನಯಾನದ ಮೊದಲ ಪರೀಕ್ಷಾರ್ಥ ಹಾರಾಟ!

ಎರಡು ತಿಂಗಳ ಹಿಂದೆ 130-135 ರೂ. ಇದ್ದ ತೊಗರಿಬೇಳೆ ಈಗ 200ರ ಗಡಿ ದಾಟಿದೆ. ಹಂತಹಂತವಾಗಿ ಏರಿಕೆಯಾಗುತ್ತಾ ಬಂದಿದ್ದು, ಈಗ ಬೆಲೆ ಮಿತಿಮೀರಿದೆ. ಹೆಸರುಕಾಳು ಸಗಟು ದರದಲ್ಲಿ ಒಂದೇ ತಿಂಗಳಲ್ಲಿ ಕೆ.ಜಿ.ಗೆ 30-40 ರೂ. ಏರಿಕೆಯಾಗಿದೆ. 100- 120 ರೂ. ಇದ್ದುದು ಈಗ 150- 160 ರೂ.ವರೆಗೆ ಮುಟ್ಟಿದೆ. ಅಕ್ಕಿ, ಗೋಧಿ ಹಾಗೂ ಬೇಳೆಕಾಳುಗಳ ದರ ತಲಾ ಶೇ.25-30ರಷ್ಟು ಏರಿಕೆಯಾಗಿವೆ.

ಮಳೆ ಕೊರತೆಯಿಂದಾಗಿ ಬೆಳೆ ಇಲ್ಲ. ಹೀಗಾಗಿ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಇರುವುದರಿಂದ ಬೆಲೆ ಗಗನಕ್ಕೇರಿದೆ. ಅಕ್ಕಿ ಕೆ.ಜಿ.ಗೆ ಸಗಟು ದರದಲ್ಲಿ2 ರೂ. ಏರಿಕೆಯಾಗಿದೆ. ಬೇಳೆ ಕಾಳುಗಳು ಕೆ.ಜಿ.ಗೆ 20-30 ರೂ.ವರೆಗೆ ಏರಿಕೆಯಾಗಿವೆ.

RELATED ARTICLES

Related Articles

TRENDING ARTICLES