ಬೆಂಗಳೂರು : ನಾನು ಬಹಳದಿನದಿಂದ ಕೆ. ಪೂರ್ಣಿಮಾ ಶ್ರೀನಿವಾಸ್ಗೆ ಗಾಳ ಹಾಕ್ತಿದ್ದೆ. ಆದರೆ, ಮೀನು ಕಚ್ಚಿರಲಿಲ್ಲ. ಶ್ರೀನಿವಾಸ ಅವರಿಗೂ ಗಾಳ ಹಾಕಿದ್ದೆ, ಈಗ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ನಿಮಗೆಲ್ಲಾ ಸ್ವಾಗತ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಂತಸದ ದಿನ. ದಿವಂಗತ ಕೃಷ್ಣಪ್ಪ ಅವರು ನಾವೆಲ್ಲಾ ಒಟ್ಟಿಗೆ ಸೇರಿ ರಾಜಕೀಯ ಮಾಡಿದವರು. ವೀರಪ್ಪ ಮೋಯ್ಲಿ ಅವರು ಪ್ರಥಮ ಬಾರಿಗೆ ಟಿಕೆಟ್ ಕೊಟ್ಟಿದ್ರು. ಕಾರಣಾಂತರಗಳಿಂದ ಕೊಂಡಿ ತಪ್ಪಿಹೋಗಿದ್ದು, ಈಗ ಬೆಸಗು ಆಗಿದೆ ಎಂದು ತಿಳಿಸಿದರು.
ದಾಸರಹಳ್ಳಿಯ ಮಾಜಿ ಕಾರ್ಪೊರೇಟರ್ ನರಸಿಂಗ ನಾಯಕ್ ಪಕ್ಷ ಸೇರ್ಪಡೆಯಾಗಿದ್ದಾರೆ. ಎಲ್ಲಾ ಬ್ಲ್ಯಾಕ್ ಮಟ್ಟದಲ್ಲೂ ಸೇರ್ಪಡೆ ಆಗಲಿದೆ. ನೀವೆ ಸೇರ್ಪಡೆ ನಡೆಸಿ ಪಕ್ಷಕ್ಕೆ ವಿಡಿಯೋ ಕಳುಹಿಸಿಕೊಳ್ಳಿ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗಿದ್ದಕ್ಕೆ ಹಲವರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಆ ಪಟ್ಟಿಯನ್ನು ಮುಂದೆ ಹೇಳುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಕಚೇರಿ ಹಿಂಭಾಗ ಭಾರತ್ ಜೋಡೋ ಸಭಾಂಗಣದಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಹಿರಿಯೂರು ಕ್ಷೇತ್ರದ ಕಾರ್ಯಕರ್ತರು ಈ ವೇಳೆ ಅವರಿಗೆ ಸಾಥ್ ನೀಡಿದರು. ಬಸ್ ಮೂಲಕ ಪೂರ್ಣಿಮಾ ಶ್ರೀನಿವಾಸ ಬೆಂಬಲಿಗರು ಕೆಪಿಸಿಸಿ ಕಚೇರಿಗೆ ಬಂದಿದ್ದರು. ಈ ವೇಳೆ ಸಚಿವ ಹಾಗೂ ಹಿರಿಯೂರು ಶಾಸಕ ಡಿ. ಸುಧಾಕರ್ ಇದ್ದರು.