ಬೆಂಗಳೂರು : ತುಲಾ ಅಥವಾ ಗರ್ಭ ಸಂಕ್ರಮಣ ರೈತರಿಗೆ ಮಹಾಪರ್ವಕಾಲವನ್ನು ಸೂಚಿಸುತ್ತದೆ. ಭೂಮಿ ತಾಯಿಯು ಚೊಚ್ಚಲ ಗರ್ಭಿಣಿಯಾಗಿದ್ದಾಗ ರೈತರು ಭೂಮಿ ತಾಯಿಗೆ ಸೀಮಂತವನ್ನು ಅದ್ದೂರಿಯಿಂದ ಮಾಡುವ ಪುಣ್ಯಕಾಲವೇ ಈ ತುಲಾ ಸಂಕ್ರಮಣ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ತುಲಾ ಸಂಕ್ರಮಣ ಯಾವಾಗ? ತುಲಾ ಸಂಕ್ರಾಂತಿ ಪುಣ್ಯಕಾಲ ಹಾಗೂ ತುಲಾ ಸಂಕ್ರಾಂತಿ ಮಹಾಪುಣ್ಯಕಾಲದ ಸಮಯ? ಸಂಕ್ರಮಣದ ಫಲಗಳೇನು? ಎಂಬ ಬಗ್ಗೆ ಪವರ್ ಟಿವಿಗೆ ಶ್ರೀಗಳು ಮಾಹಿತಿ ನೀಡಿದ್ದಾರೆ.
ಶ್ರೀ ಸೂರ್ಯನಾರಾಯಣ ಸ್ವಾಮಿಯು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡುವ ಮಹಾಪುಣ್ಯಕಾಲವೇ ಈ ತುಲಾ ಸಂಕ್ರಮಣ. ಈ ತುಲಾ ಸಂಕ್ರಮಣದಲ್ಲಿ ಪವಿತ್ರ ನದಿಗಳ ಸ್ನಾನ ಮಾಡುವುದರಿಂದ ಸಕಲ ಅಭೀಷ್ಟಗಳನ್ನು ಭಕ್ತರು ಹೊಂದುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ.
ತುಲಾ ಸಂಕ್ರಮಣದ ಫಲಗಳೇನು?
ಅನೇಕ ಪ್ರಕೃತಿ ವಿಕೋಪ ಉಂಟಾಗುತ್ತವೆ
ಯಾವ ರಾಶಿಯವರಿಗೆ ಅದೃಷ್ಟ ಬದಲಾಗುತ್ತೆ?
ಮಿಥುನ, ಸಿಂಹ, ಮಕರ, ವೃಶ್ಚಿಕ, ಮೀನ, ಮೇಷ ರಾಶಿಯವರಿಗೆ ಯಾವುದಾದರು ಸ್ವಂತ ಉದ್ಯಮ ಅಥವಾ ಯಾವುದಾದರೂ ರಾಜಕೀಯ ಪಕ್ಷವನ್ನು ಸ್ಥಾಪಿಸಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ. ಆ ಸಮಯ ಮತ್ತು ದಶಾಭುಕ್ತಿಯನ್ನು ಪರಿಶೀಲಿಸಿ ಎಂದು ಶ್ರೀಗಳು ಆಶೀರ್ವಚನ ನೀಡಿದ್ದಾರೆ.