Sunday, May 11, 2025

ಸತ್ಯ ಹರಿಶ್ಚಂದ್ರ ಅಂದ್ರೆ ಡಿಕೆಶಿ, ಸತ್ಯ ಹರಿಶ್ಚಂದ್ರ ಅಂದ್ರೆ ಸಿದ್ದರಾಮಯ್ಯ : ಅಶ್ವತ್ಥ ನಾರಾಯಣ್

ಬೆಂಗಳೂರು : ಈ ಹಿಂದೆ (ಬಿಜೆಪಿ ಸರ್ಕಾರದಲ್ಲಿ) ಸಿಎಂ ಕಚೇರಿಯಲ್ಲಿ ಏನು ಏನು ನಡೆಯುತ್ತಿತ್ತು ಎಂಬುದರ ಬಗ್ಗೆ ಬಿಚ್ಚಿಡುತ್ತೇನೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ದೊಡ್ಡ ಮಹಾಪುರುಷರು. ಸತ್ಯ ಹರಿಶ್ಚಂದ್ರರು. ಸತ್ಯ ಹರಿಶ್ಚಂದ್ರರು ಅಂದರೆ ಡಿ.ಕೆ ಶಿವಕುಮಾರ್, ಸತ್ಯ ಹರಿಶ್ಚಂದ್ರರು ಎಂದರೆ ಸಿದ್ದರಾಮಯ್ಯ ಅಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಐಟಿ ರೇಡ್​ನಲ್ಲಿ ಸಿಕ್ಕಿರುವ ಹಣ ಯಾರು ಎಂದು ಹೇಳ್ರಿ.. ಇಡೀ ರಾಜ್ಯವನ್ನು ಲೂಟಿ ಮಾಡಿದವರು, ತಿಹಾರ್ ಜೈಲಿನಿಂದ ಬಂದವರು. ಹ್ಯೂಬ್ಲೆಟ್ ವಾಚ್ ಹಾಕೊಂಡು ಶೋಕಿ ಮಾಡಿದವರು. ಆಯ್ತಪ್ಪ.. ಸಮಯ ಬಂದಿದೆ ಅದೇನು ಹೇಳಿಸಪ್ಪ ನೋಡೋಣ. ಅಂಬಿಕಾಪತಿ ಹಾಗೂ ಮಹಾಲಕ್ಷ್ಮಿ ಲೇಔಟ್​ನಲ್ಲಿ ಸಿಕ್ಕ ಹಣ ಯಾರದ್ದು ಎಂದು ಮೊದಲು ಹೇಳಪ್ಪ ಎಂದು ಡಿಕೆಶಿಗೆ ಅಶ್ವತ್ಥ ನಾರಾಯಣ್ ಕೌಂಟರ್ ಕೊಟ್ಟಿದ್ದಾರೆ.

ಪೈಸೆ ಕೇಳೋಕೆ ಅವರೇನು ಭಿಕ್ಷುಕರಾ?

ಎಲ್ಲಿ ನೋಡಿದ್ರು ಭ್ರಷ್ಟಾಚಾರ, ಲೂಟಿ ಮಾಡೋದೇ ಕಾಂಗ್ರೆಸ್. ನೀವು ಹೇಳ್ತೀರಲ್ಲ ಪೈಸೆನೂ ಕೇಳಿಲ್ಲ ಅಂತಾ.. ಪೈಸೆ ಕೇಳೋಕೆ ಅವರೇನು ಭಿಕ್ಷುಕರಾ? ಕೋಟಿ ಕೋಟಿ ಅಲ್ವಾ ಅವ್ರು ಕೇಳ್ತಿರೋದು. ಅವರಿಗೆ ತಟ್ಟುವ ಶಾಪ, ಜನರಿಗೆ ತಂದೊಡ್ಡುಬಿಟ್ಡಿದ್ದಾರೆ. ಇಡೀ ಸಚಿವ ಸಂಪುಟ ರಾಜೀನಾಮೆ ಕೊಡಬೇಕು ಎಂದು ಹರಿಹಾಯ್ದಿದ್ದಾರೆ.

RELATED ARTICLES

Related Articles

TRENDING ARTICLES