Thursday, December 19, 2024

ಮೋದಿ ಗೆಲ್ಲಿಸಿದ್ರೆ ಉಳಿತೀರಿ, ಇಲ್ಲ ನೀವ್ಯಾರೂ ಉಳಿಯಲ್ಲ : ಮಹಾಲಿಂಗೇಶ್ವರ ಶ್ರೀ

ಬಾಗಲಕೋಟೆ : ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಿದರೆ ನೀವು ಉಳಿತೀರಿ, ಇಲ್ಲ ನೀವ್ಯಾರೂ ಉಳಿಯಲ್ಲ ಎಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಮಹಾಲಿಂಗಪುರ ಪಟ್ಟಣದವರಾದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜಕೀಯ ವಿದ್ಯಮಾನದ ಬಗ್ಗೆ ಹೇಳಿಕೆ ನೀಡಿ ಭಾರಿ ಸುದ್ದಿಯಾಗಿದ್ದಾರೆ. ಸ್ವಾಮೀಜಿಯವರ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ನವರಾತ್ರಿ ದೀಪೋತ್ಸವದ ವೇಳೆ ಸ್ವಾಮೀಜಿ ಆಡಿದ ಜಟ ಭವಿಷ್ಯ ಇದಾಗಿದೆ. ಇದರ ಮೇಲೆ ಏನಾದರೂ ವ್ಯತ್ಯಾಸ ಮಾಡಿದರೆ ಹಾಳಾಗುವ ಕಾಲ ಬರುತ್ತದೆ. ಪ್ರಧಾನಿ ಮೋದಿಯನ್ನು ಮತ್ತೆ ಆಯ್ಕೆ ಮಾಡಿ ತಂದರೆ ನೀವು ಉಳಿತೀರಿ, ಇಲ್ಲ ನೀವ್ಯಾರೂ ಉಳಿಯಲ್ಲ ಎಂದು ನುಡಿದಿದ್ದಾರೆ. ಸ್ವಾಮೀಜಿಯ ಈ ಹೇಳಿಕೆಗೆ ಪರ ಹಾಗೂ ವಿರೋಧ ಅಭಿಪ್ರಾಯ ಕೇಳಿಬರುತ್ತಿದೆ.

ಜಟ ಹಿಡಿದು ಹೇಳುವ ಭವಿಷ್ಯ ನಿಜ

ಕೈಯಲ್ಲಿ ಜಟ (ಕೂದಲು) ಹಿಡಿದು ಜಟವಾಣಿ ನುಡಿದಿದ್ದಾರೆ. ಮೂಲ ಮಹಾಲಿಂಗೇಶ್ವರ ಸ್ವಾಮೀಜಿ ಅವರ ಜಟ (ಕೂದಲು) ಪ್ರತಿ ವರ್ಷ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಸ್ವಾಮೀಜಿ ಜಟ ಹಿಡಿದು ಹೇಳುವ ಭವಿಷ್ಯ ನಿಜ ಎಂಬುದು ಇಲ್ಲಿಯ ಭಕ್ತರ ನಂಬಿಕೆಯಾಗಿದೆ.

RELATED ARTICLES

Related Articles

TRENDING ARTICLES