Friday, November 22, 2024

ಇಂಡೋ -ಪಾಕ್ ಕದನಕ್ಕೆ ಪೊಲೀಸ್ ಸರ್ಪಗಾವಲು

ಅಹ್ಮದಾಬಾದ್​: ಕ್ರಿಕೆಟ್​​ ಲೋಕದ ಮಹಾ ಕಾಳಗಕ್ಕೆ ವೇದಿಕೆ ಸಜ್ಜಾಗಿದ್ದು ಸದ್ಯ ವಿಶ್ವದ ಚಿತ್ತ ಭಾರತದ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನ ಮೇಲಿದೆ. ಕ್ರಿಕೆಟ್​ ಲೋಕದ ಮಹಾಯುದ್ಧಕ್ಕೆ ಅಹಮ್ಮದಾಬಾದ್​ನಲ್ಲಿ ಸಿದ್ಧತೆ ನಡೆದಿದೆ ಈ ಹಿನ್ನೆಲೆ ಮೈದಾನದ ಸುತ್ತ ಪೊಲೀಸ್​ ಬಿಗಿ ಬಂದೊಬಸ್ತ್​ ಮಾಡಲಾಗಿದೆ.

ವಿಶ್ವದ ಬಹು ನಿರೀಕ್ಷಿತ ಕ್ರಿಕೆಟ್​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದ್ದು ಸಬರಮತಿಯ ನದಿಯ ತಟದಲ್ಲಿ ನಡೆಯೋ ಕ್ರಿಕೆಟ್​ ಪಂದ್ಯ ಇಡೀ ಜಗತ್ತಿನ ಚಿತ್ತವನ್ನ ತನ್ನಡೆ ಸೆಳೆದಿದೆ. ಇದು ಕೇವಲ ಕ್ರಿಕೆಟ್​ ಪಂದ್ಯವಲ್ಲ ಪ್ರತಿಷ್ಠೆಯ ಮಹಾಕಾಳಗ. ನಿರೀಕ್ಷೆಗಿಂತಲೂ ಹೆಚ್ಚು ಫ್ಯಾನ್ಸ್​ ಪಂದ್ಯ ವೀಕ್ಷಿಸಲು ಅಹ್ಮದಾಬಾದ್​ ನಗರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: WorldCup- 2023: ಇಂದು ಭಾರತ V/S ಪಾಕಿಸ್ತಾನ ಮುಖಾಮುಖಿ!

ಈಗ ಸುರಕ್ಷಿತವಾಗಿ ಪಂದ್ಯವನ್ನ ನಡೆಸೋ ಜವಾಬ್ದಾರಿ ಬಿದ್ದಿರೋದು ಬಿಸಿಸಿಐ ಹೆಗಲಿಗಿದೆ ಈ ನಿಟ್ಟಿನಲ್ಲಿ ಬಿಸಿಸಿಐ, ಗುಜರಾತ್​​ ಸರ್ಕಾರ ಹಾಗೂ ರಾಜ್ಯ ಪೊಲೀಸ್​ ಇಲಾಖೆಯ ಸಹಾಯಹಸ್ತ ಕೋರಿದೆ. ಸದ್ಯ ಬಿಗಿ ಬಂದೋಬಸ್ತ್​​ ಕೈಗೊಳ್ಳಲು ಪೊಲೀಸ್​ ಇಲಾಖೆ, ಕೇಂದ್ರ ರಕ್ಷಣಾ ಇಲಾಖೆ ಜಂಟಿಯಾಗಿ ಅಖಾಡಕ್ಕಿಳಿದಿವೆ.

ಇಂದಿನ ಪಂದ್ಯಕ್ಕೆ 4 ಐಜಿ & ಡಿಜಿಗಳು, 21 ಡಿಸಿಪಿಗಳು, 3 ಆ್ಯಂಟಿ ಡ್ರೋನ್​ ಟೀಮ್​, 9 ಬಾಂಬ್​ ನಿಷ್ಕ್ರಿಯ ದಳ, 7 ಸಾವಿರಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿ, 4000 ಹೋಮ್​ ಗಾರ್ಡ್ಸ್, ಸಶಸ್ತ್ರ ಮೀಸಲು ಪಡೆಯ 13 ತಂಡ, SDRF ಹಾಗೂ NDRF​ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.

RELATED ARTICLES

Related Articles

TRENDING ARTICLES