ಬೆಂಗಳೂರು : ಎಲೆಕ್ಟ್ರಿಕ್ ರಿಕ್ಷಾದ ಚಾಲಕಿಯೊಬ್ಬಳು ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಫಾಜಿಯಾಬಾದ್ನಲ್ಲಿ ಇಂದಿರಾಪುರಂ ಪ್ರದೇಶದಲ್ಲಿ ಮಂಗಳವಾರ ಹಾಡಹಗಲೇ ಈ ಘಟನೆ ನಡೆದಿದ್ದು, ಸ್ಥಳೀಯರೊಬ್ಬರು ವಿಡಿಯೋ ಚಿತ್ರೀಕರಿಸಿದ್ದಾರೆ.
ಮಹಿಳೆ ತನ್ನ ಮೇಲೆ ನಿರಂತರ ಹೊಡೆಯುತ್ತಿರುವಾಗ ಆತ್ಮರಕ್ಷಣೆಗಾಗಿ ಪೊಲೀಸ್ ತಡೆಯಲು ಪ್ರಯತ್ನಿಸಿದ್ದು, ಆಕೆಯನ್ನು ಹೊಡೆಯಲು ಕೈ ಎತ್ತಿದ್ದಾರೆ. ಆದರೂ ಆಕೆ ತನ್ನ ಥಳಿತವನ್ನು ಮುಂದುವರೆಸಿದ್ದಾಳೆ.
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ತನಿಖೆಗಾಗಿ ಪ್ರಕರಣ ದಾಖಲಿಸಲಾಗಿದೆ. ಇ-ರಿಕ್ಷಾದಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಣಕ್ಕೆ ಆಕೆಯ ವಿರುದ್ಧ ಸಂಚಾರ ವಿಭಾಗದಿಂದಲೂ ದೂರು ದಾಖಲಾಗಿದ್ದು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
उत्तर प्रदेश गाजियाबाद के NH9 कनवानी पुस्ता रोड पर ट्रैफिक पुलिस कर्मी दरोगा से ई रिक्शा चालक महिला भिड़ी आपस में जोरदार मारपीट की गई जिसमें हाथ चप्पल जूते सब चले pic.twitter.com/17CouYyVTN
— Mαɳιʂԋ Kυɱαɾ αԃʋσƈαƚҽ 🇮🇳🇮🇳 (@Manishkumarttp) October 11, 2023