ಬೆಂಗಳೂರು : BBMP ಅಂದರೆನೇ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ BBMP ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. BBMP ಮಾರ್ಷಲ್ಗಳ ಹೆಸರಲ್ಲಿ BBMP ಕೋಟಿ ಕೋಟಿ ಹಣ ಲೂಟಿ ಹೊಡೆಯುತ್ತಿದೆ. ಕಡಿಮೆ ವೇತನ ನೀಡಿ ಹೆಚ್ಚು ನೀಡ್ತಿದ್ದೇವೆಂದು ದಾಖಲೆಯಲ್ಲಿ ತೋರಿಸಿದೆ. ಅದಕ್ಕೆ ಸಾಕ್ಷಿಯೂ ಲಭ್ಯವಾಗಿದೆ.
ಭ್ರಷ್ಟಾಚಾರದ ಯೂನಿವರ್ಸಿಟಿ BBMP ಅಂದ್ರೆ ತಪ್ಪಾಗಲ. ಯಾಕೆಂದರೆ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲೂ ಏನಾದರೂ ಒಂದು ಗೋಲ್ಮಾಲ್ ನಡೆದೇ ಇರುತ್ತದೆ. ಅದೇರೀತಿ ಇದೀಗ ಬಿಬಿಎಂಪಿಯ ವೇತನ ಗೋಲ್ಮಾಲ್ ಬಹಿರಂಗವಾಗಿದೆ. ಬಿಬಿಎಂಪಿ ಅಧಿಕಾರಿಗಳು ಬಿಬಿಎಂಪಿಗಳಲ್ಲಿರುವ ಮಾರ್ಷಲ್ಗಳಿಗೆ ನೀಡೋ ಸಂಬಳದಲ್ಲೂ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ.
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳ ಮುಖವಾಡ ಮತ್ತೊಮ್ಮೆ ಕಳಚಿದೆ. ಮಾರ್ಷಲ್ಗಳ ಸಂಬಳದಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿರೋ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 750 ಮಾರ್ಷಲ್ಗಳನ್ನ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳು ಒಬ್ಬ ಮಾರ್ಷಲ್ಗೆ ಬಿಬಿಎಂಪಿಯಿಂದ 25 ಸಾವಿರ ವೇತನ ನೀಡಲಾಗ್ತಿದೆ. ಆದ್ರೆ ಮಾರ್ಷಲ್ ಕೈಗೆ ಸೇರೋದು ಕೇವಲ 17 ಸಾವಿರ ಹಣ ಮಾತ್ರ. ಹಾಗಾದ್ರೆ ಉಳಿದ 8 ಸಾವಿರ ಭ್ರಷ್ಟ ಅಧಿಕಾರಿಗಳ ಪಾಲಾಗ್ತಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ರವರನ್ನ ಕೇಳಿದರೆ ಉಡಾಫೆ ಉತ್ತರ ಕೊಡ್ತಿದ್ದಾರೆ.
25,000 ಬದಲಿಗೆ 17,000
ಇನ್ನು ಪ್ರತಿ ತಿಂಗಳು ಮಾರ್ಷಲ್ಗಳ ಬ್ಯಾಂಕ್ ಖಾತೆಗೆ 25 ಸಾವಿರ ಬದಲಿಗೆ 17 ಸಾವಿರ ಹಣ ಜಮೆ ಆಗ್ತಿದೆ. ಈ ಬ್ಯಾಂಕ್ ಸ್ಟೇಟ್ಮೆಂಟ್ ಸಹ ಪವರ್ ಟಿವಿಗೆ ಲಭ್ಯವಾಗಿದೆ. ಒಟ್ನಲ್ಲಿ ಬಿಬಿಎಂಪಿ ಆಧಿಕಾರಿಗಳು ಮಾರ್ಷಲ್ ಸಂಬಳದಲ್ಲೂ ಹಣ ಲೂಟಿ ಮಾಡ್ತಿರೋದು ಹಿರಿಯ ಅಧಿಕಾರಿಗಳ ಗಮನಕೆ ಬಂದಿದ್ರು ಕಣ್ಣು ಮುಚ್ಚಿ ಕುಳಿತಿದ್ದಾರೆ.