Monday, November 18, 2024

ವಿರಾಜಪೇಟೆಯಲ್ಲಿ ‘ಗಜ’ಪಡೆ.. ಪುತ್ರನೊಂದಿಗೆ ‘ಡಿ’ ಬಾಸ್ ದಚ್ಚು

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಸಿನಿಮಾ ಕೆಲಸಗಳಿಂದ ಕೊಂಚ ಬಿಡುವು ಸಿಕ್ಕರೆ ಕಾಡು ಮೇಡು ಅಂತ ಆಫ್ ರೋಡ್ ಟ್ರಿಪ್ ಹೊರಟುಬಿಡ್ತಾರೆ. ಕಾಡು-ಮೇಡು-ಪ್ರಕೃತಿ-ಪ್ರಾಣಿ-ಪಕ್ಷಿಗಳು ಅಂದರೆ ದರ್ಶನ್ ಅವರಿ​ಗೆ ಅಚ್ಚುಮೆಚ್ಚು. ಅದರಂತೆಯೇ ಈ ಬಾರಿ ಡಿ ಬಾಸ್ ವಿರಾಟಪೇಟೆ ಕಾಡನ್ನು ಸುತ್ತಿಬಂದಿದ್ದು, ಪುತ್ರ ವಿನೀಶ್​ ದರ್ಶನ್​ಗೂ ಅರಣ್ಯದ ಸೊಬಗನ್ನು ದರ್ಶನ ಮಾಡಿಸಿದ್ದಾರೆ.

  • ವಿರಾಜಪೇಟೆಯಲ್ಲಿ ಗಜಪಡೆ.. ಮಗನೊಂದಿಗೆ ಡಿಬಾಸ್ ದಚ್ಚು
  • ಶೂಟಿಂಗ್ ಬಿಡುವಿನಲ್ಲಿ.. ಜಾಲಿರೈಡ್​​ ಮೂಡ್​​ನಲ್ಲಿ ದರ್ಶನ್..!
  • ದಟ್ಟ ಕಾಡಲ್ಲಿ ಆಫ್ ರೋಡ್​ ಟ್ರಿಪ್.. ಪುತ್ರನ ಜೊತೆ ಸಾಹಸಯಾತ್ರೆ
  • ಕೊನೆಯ ಹಂತದಲ್ಲಿ ಕಾಟೇರ.. ಡೈಹಾರ್ಡ್​ ಫ್ಯಾನ್ಸ್ ವೆಯ್ಟಿಂಗ್..!

ಹೌದು, ದರ್ಶನ್ ಜಾಲಿ ರೈಡ್ ಮೂಡ್​​ನಲ್ಲಿದ್ದಾರೆ. ಕಾಟೇರ ಸಿನಿಮಾದ ಬಿಡುವಿಲ್ಲದ ಶೂಟಿಂಗ್​ ನಡುವೆ ಒಂಚೂರು ಬಿಡುವು ಸಿಕ್ಕಿದ್ದೇ ತಡ ದಚ್ಚು ತಮ್ಮ ‘ಗಜ’ಪಡೆ ಸಮೇತ ವಿರಾಜಪೇಟೆ ಅರಣಕ್ಕೆ ಜಾಲಿರೈಡ್ ಹೋಗಿದ್ದಾರೆ. ವಿಶೇಷ ಅಂದ್ರೆ ದರ್ಶನ್ ಅವರ ಆಫ್​ ರೋಡ್​​ ಟ್ರಿಪ್​ನಲ್ಲಿ ಪುತ್ರ ವಿನೀಶ್ ಕೂಡ ಸಾಥ್ ಕೊಟ್ಟಿದ್ದಾರೆ.

ದರ್ಶನ್​ ಬಿಡುವು ಸಿಕ್ಕಾಗೆಲ್ಲಾ ಇಂಥ ಸಾಹಸಯಾತ್ರೆಗಳಿಗೆ ಹೋಗ್ತಾನೇ ಇರುತ್ತಾರೆ. ಇದೀಗ ತಮ್ಮ ಪುತ್ರನಿಗೂ ಈ ಸಾಹಸಯಾತ್ರೆಯ ದರ್ಶನ ಮಾಡಿಸಿದ್ದಾರೆ ಡಿ ಬಾಸ್. ಸ್ನೇಹಿತರ ಜೊತೆಗೆ ಮಡಿಕೇರಿಯ ವಿರಾಜಪೇಟೆ ಕಾಡಿಗೆ ಆಫ್​ ರೋಡ್​ ಟ್ರಿಪ್ ಹೋಗಿರೋ ದಚ್ಚು ದಟ್ಟ ಕಾಡಿನ ನಡುವೆ ಟೆಂಟ್​​ ಹಾಕ್ಕೊಂದು  ಪ್ರಕೃತಿ ನಡುವೆ ಸಮಯ ಕಳೆದಿದ್ದಾರೆ.

ಆಫ್ ರೋಡ್ ಟ್ರಿಪ್ ಹೇಳಿ ಮಾಡಿಸಿರೋ ದರ್ಶನ್ ಜೀಪು , ಅವರನ್ನ ಹಿಂಬಾಲಿಸೋ ಗೆಳೆಯರ ಕಾರುಗಳು ಟೋಟಲಿ ಈ ಜರ್ನಿ ಸಖತ್ ಸಾಹಸಮಯವಾಗಿದೆ. ಹೀಗೆ ಕಾಡು ಮೇಡು ಸುತ್ತೋದು ಸಾಹಸಗಳನ್ನ ಮಾಡೋದು, ನೇಚರ್ ಫೋಟೋಗ್ರಫಿ ದರ್ಶನ್ ಅವರಿಗೆ ಬಲುಇಷ್ಟ. ಆಗಾಗ ಇಂಥ ಟ್ರಿಪ್​ಗಳನ್ನು ಮಾಡುವ ದರ್ಶನ್, ಅದನ್ನ ಫ್ಯಾನ್ಸ್ ಜೊತೆಗೆ ಹಂಚಿಕೊಳ್ತಾ ಇರ್ತಾರೆ. ಈ ಬಾರಿ ಡಿ ಬಾಸ್​ ಜೊತೆ ಮರಿ ವಿ ಬಾಸ್​ರನ್ನ ​ನೋಡಿ ದಾಸನ ಸೆಲೆಬ್ರೆಟಿಗಳು ಫುಲ್ ಖುಷ್ ಆಗಿದ್ದಾರೆ.

  • ಅಮಿತ್ ದೇಸಾಯಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES