ಬೆಂಗಳೂರು : ಮದ್ಯದ ಅಂಗಡಿಗಳನ್ನು ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸ ಮದ್ಯದಂಗಡಿ ತೆರೆಯುವ ಪ್ರಸ್ತಾಪ ಇಲ್ಲ. ಮಾಜಿ ಸಿಎಂ ಬೊಮ್ಮಾಯಿಯವರೇ ಮದ್ಯದಂಗಡಿಗೆ ಅನುಮತಿ ಕೊಟ್ಟ ತರಹ ಅವರೇ ಮಾತನಾಡೋದು. ಕೊಟ್ಟರೆ ಅನ್ಯಾಯ ಆಗ್ತದೆ ಅಂತ ಅವರೇ ಹೇಳೋದು. ಸರ್ಕಾರ ಇನ್ನೂ ನಿರ್ಧಾರವೇ ತೆಗೆದುಕೊಂಡಿಲ್ಲ, ಆಗಲೇ ವಿಪಕ್ಷ ಜನರ ದಾರಿ ತಪ್ಪಿಸುತ್ತಿದೆ.
ಇದನ್ನೂ ಓದಿ: ವಿಶ್ವಕಪ್ 2023: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ!
ಹೆಣ್ಣುಮಕ್ಕಳಿಗೆ ಪಾಪ ವಿಪಕ್ಷದವರೇ ತಪ್ಪು ತಿಳುವಳಿಕೆ ಕೊಡ್ತಿದ್ದಾರೆ. ಇದು ಬಹಳ ತಪ್ಪು. ಯಾರು ಹೇಳಿದ್ದಾರೆ ಸಾರಾಯಿ ಅಂಗಡಿಗೆ ಅನುಮತಿ ಕೊಡ್ತೀವಿ ಅಂತ ಅಂದ್ರು. ನಾನು ಹೇಳಿದ್ದೀನಾ, ಸಿಎಂ ಹೇಳಿದ್ದಾರಾ, ಡಿಸಿಎಂ ಹೇಳಿದ್ದಾರಾ ಎಂದು ಪ್ರಶ್ನಿಸಿದರು. ಅನುಮತಿ ಕೊಟ್ಟೇ ಬಿಟ್ಟಿದ್ದೀವಿ ಎನ್ನೋ ತರಹ ಮಾತನಾಡ್ತಿದ್ದಾರೆ. ಒಂದು ಭಾಗ್ಯ ಕೊಡ್ತು ಇನ್ನೊಂದು ಭಾಗ್ಯ ಕಿತ್ತುಕೊಳ್ತು ಅಂತ ಮಾತನಾಡ್ತಿದ್ದಾರೆ. ವಿರೋಧ ಪಕ್ಷದವರಿಗೆ ಮಾಡುವುದಕ್ಕೆ ಬೇರೆ ಕೆಲಸಗಳಿವೆ ಅವನ್ನು ಮಾಡಲಿ ಎಂದು ಕಿಡಿಕಾರಿದರು.