ಬೆಂಗಳೂರು : ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಭಾರತ ಪದಕಗಳ ಸೆಂಚುರಿ ಸಿಡಿಸಿ ಸಂಭ್ರಮಿಸುತ್ತಿದೆ.
ನಿನ್ನೆ 95ಕ್ಕೆ ಏರಿಕೆಯಾಗಿದ್ದ ಪದಕಗಳ ಸಂಖ್ಯೆಗೆ ಇಂದು ಮತ್ತೆ 5 ಪದಕ ಸೇರಿಸುವ ಮೂಲಕ ಈ ಮೈಲುಗಲ್ಲು ಸಾಧಿಸಿದೆ. ಈ ಮೂಲಕ ಅಬ್ ಕಿ ಬಾರ್.. 100 ಪಾರ್ ಎಂಬ ಧ್ಯೇಯ ವಾಕ್ಯವನ್ನು ನಮ್ಮ ಕ್ರೀಡಾಪಟುಗಳು ನಿಜವಾಗಿಸಿದ್ದಾರೆ. ಈ ಸಾಧನೆಯಒಂದಿಗೆ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ, ಹಾರೈಕೆ ಈಡೇರಿದಂತಾಗಿದೆ.
ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ ಸಿಕ್ಕಿದೆ. 2018ರಲ್ಲಿ 70 ಪದಕ ಗೆದ್ದಿದ್ದೇ ಈವರೆಗಿನ ದೊಡ್ಡ ಸಾಧನೆಯಾಗಿದೆ. ಭಾರತದ ಅಥ್ಲೀಟ್ಗಳು 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಗೆದ್ದಿದ್ದಾರೆ. ಚೀನಾ 354 ಪದಕ, ಜಪಾನ್ 169, ಕೊರಿಯಾ 169 ಪದಕ ಸಿಕ್ಕಿದೆ.
ಪ್ರಧಾನಿ ಮೋದಿ ಅಭಿನಂದನೆ
ಏಷ್ಯನ್ ಗೇಮ್ಸ್ನಲ್ಲಿ ಭಾರತ 100 ಪದಕಗಳನ್ನು ಗೆದ್ದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಅವರು, ‘ಭಾರತಕ್ಕೆ ಇದೊಂದು ಪ್ರಮುಖ ಸಾಧನೆ. ಈ ಐತಿಹಾಸಿಕ ಸಾಧನೆಗೆ ಕಾರಣರಾದ ಎಲ್ಲಾ ಕ್ರೀಡಾಪಟುಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಪ್ರತಿಯೊಂದು ವಿಸ್ಮಯಕಾರಿ ಪ್ರದರ್ಶನವು ಇತಿಹಾಸವನ್ನು ಸೃಷ್ಟಿಸಿದೆ’ ಎಂದು ಹೇಳಿದ್ದಾರೆ.
Heartfelt congratulations to our incredible Indian athletes for their remarkable achievement of winning 100 medals at the Asian Games!
Your dedication, hard work, and outstanding performances have made our nation proud.
Keep shining on the international stage and inspiring… pic.twitter.com/n5T7qoPkdK
— Narendra Modi (Parody) (@NarendramodiPa) October 7, 2023