Monday, November 18, 2024

ಚಿನ್ನ.. ಬಿಲ್ಲುಗಾರಿಕೆಯಲ್ಲಿ ಭಾರತದ ‘ಜ್ಯೋತಿ’ಗೆ ಬಂಗಾರ

ಬೆಂಗಳೂರು : ಏಷ್ಯನ್​ ಗೇಮ್ಸ್​-2023 ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಈ ಮೂಲಕ ಭಾರತದ ಬಂಗಾರದ ಬೇಟೆ ಮುಂದುವರಿದಿದೆ.

ಮಹಿಳೆಯರ ಕಾಂಪೌಂಡ್​ ಬಿಲ್ಲುಗಾರಿಕೆಯಲ್ಲಿ ಜ್ಯೋತಿ ವೆನ್ನಮ್​ ಅವರು ಬಂಗಾರದ ಪದಕ ಗೆದ್ದಿದ್ದಾರೆ. ಫೈನ್​ಲ್​ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸೋ ಚೇ ಅವರನ್ನು 149-145 ಪಾಯಿಂಟ್ಸ್​ಗಳ ಅಂತರದಿಂದ ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇನ್ನೂ ಆರ್ಚರ್​ ಅದಿತಿ ಗೋಪಿಚಂದ್​ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದರೊಂದಿಗೆ ಭಾರತ 23ನೇ ಚಿನ್ನದ ಪದಕದೊಂದಿಗೆ ಒಟ್ಟು 97 ಪದಕಗಳನ್ನು ಗೆದ್ದಿದೆ. ಇಂದು 100 ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಲು ಭಾರತ ಸಜ್ಜಾಗಿದೆ.

ಏಷ್ಯನ್​​ ಗೇಮ್ಸ್​ ಪದಕಗಳ ಪಟ್ಟಿ

  • ಚೀನಾ : 354 (187 ಚಿನ್ನ, 104 ಬೆಳ್ಳಿ, 63 ಕಂಚು)
  • ಜಪಾನ್ : 169 (47 ಚಿನ್ನ, 57 ಬೆಳ್ಳಿ, 65 ಕಂಚು)
  • ರಿಪಬ್ಲಿಕ್ ಆಫ್ ಕೊರಿಯಾ : 169 (36 ಚಿನ್ನ, 49 ಬೆಳ್ಳಿ, 84 ಕಂಚು)
  • ಭಾರತ : 95 (22 ಚಿನ್ನ, 34 ಬೆಳ್ಳಿ, 39 ಕಂಚು)
  • ಉಜ್ಬೇಕಿಸ್ತಾನ್ : 64 (20 ಚಿನ್ನ, 18 ಬೆಳ್ಳಿ, 26 ಕಂಚು)
  • ಚೈನೀಸ್​ ತೈಪೆ : 58 (17 ಚಿನ್ನ, 16 ಬೆಳ್ಳಿ, 25 ಕಂಚು)
  • ಉತ್ತರ ಕೊರಿಯಾ : 39 (11 ಚಿನ್ನ, 18 ಬೆಳ್ಳಿ, 10 ಕಂಚು)

RELATED ARTICLES

Related Articles

TRENDING ARTICLES