ದಾವಣಗೆರೆ : ಡಿಸೆಂಬರ್ 23 ಹಾಗೂ 24ರಂದು ಲಿಂಗಾಯಿತ ಮಹಾ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಗಿದ್ದು, ಈ ಮೂಲಕ ಶಾಮನೂರು ಶಿವಶಂಕರಪ್ಪನವರು ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ.
ದಾವಣಗೆರೆಯಲ್ಲಿ ಲಿಂಗಾಯತರ 24ನೇ ಮಹಾ ಅಧಿವೇಶನ ನಡೆಯಲಿದ್ದು, ಈ ಹಿನ್ನಲೆ ಸಭೆ ನಡೆಸಲಾಗಿದೆ. ಮುಂದೂಡಿಕೆಯಾಗಿದ್ದ ಲಿಂಗಾಯಿತ ಮಹಾ ಅಧಿವೇಶನಕ್ಕೆ ಮತ್ತೆ ಚಾಲನೆ ಸಿಕ್ಕಂತಾಗಿದ್ದು, ದಾವಣಗೆರೆ ನಗರದ ಎಂಬಿಎ ಮೈದಾನದಲ್ಲಿ ಡಿಸೆಂಬರ್ 23 ಹಾಗೂ24 ರಂದು ಮಹಾ ಅಧಿವೇಶನ ನಡೆಸಲು ನಿರ್ಧಾರ ಮಾಡಲಾಗಿದೆ. ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಮೀಸಲಾತಿ ಬೇಡಿಕೆ ಮೊಳಗಲಿದೆ.
ಸತ್ಯ ಸಂಗತಿಯನ್ನೇ ಹೇಳಿದ್ದೇನೆ
ಶಾಮನೂರು ಶಿವಶಂಕರಪ್ಪ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ದ ನಾನೇನು ಬಾಂಬ್ ಹಾಕಿಲ್ಲ, ಇರುವ ಸತ್ಯ ಸಂಗತಿಯನ್ನೇ ಹೇಳಿದ್ದೇನೆ. ನಾನು ಹೇಳಿರುವುದೆಲ್ಲವೂ ಸತ್ಯ..! ಸಿಎಂ ಜೊತೆ ಚರ್ಚಿಸುವ ವಿಚಾರವನ್ನು ಸಿಎಂ ಅವರನ್ನೇ ಕೇಳಿ. ಕೆಲವೊಂದು ಸೀಕ್ರೆಟ್ ವಿಚಾರ ಹೇಳೋಕೆ ಬರೋದಿಲ್ಲ ಎಂದು ಹೇಳಿದ್ದಾರೆ.