ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಹಲವೆಡೆ ಹೊಸಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ.
ಬೆಂಗಳೂರಿನಾದ್ಯಂತ ಜನಸಂಖ್ಯೆ ಹೆಚ್ಚಾಗುತ್ತಿದ್ದು ಕೆಲಸ ಕಾರ್ಯಗಳಿಗೆ ನಿತ್ಯ ಒಂದಿಲ್ಲೊಂದು ಕಡೆ ಸಂಚಾರಿಸಲು ಬಿಎಂಟಿಸಿ ಅನಿವಾರ್ಯವಾಗಿದೆ. ಪ್ರಯಾಣಿಕರು ಹಾಗು ಸಾರ್ವಜನಿಕರಿಂದ ನಗರದ ಕೆಲವು ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಮನವಿಗಳು ಬಂದ ಹಿನ್ನೆಲೆ ಬಿಎಂಟಿಸಿ ವತಿಯಿಂದ ನೂತವಾಗಿ ಕೆಲವು ಮಾರ್ಗಗಳಿಗೆ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಟ್ರೈನ್ನಲ್ಲಿ ಗೋಬಿ ಸೇವಿಸಿದ ಪ್ರಯಾಣಿಕ: 500 ರೂ.ದಂಡ ವಸೂಲಿ!
8ನೇ ಮೈಲಿಯಿಂದ ಗಂಗೊಂಡನಹಳ್ಳಿ ಮೂಲಕ ಕಾಚೋಹಳ್ಳಿ ಗೇಟ್ ವರೆಗೆ 3 ಬಸ್‌ಗಳು ನಿತ್ಯ 27 ಟ್ರಿಪ್ ಸಂಚರಿಸಲಿವೆ. ಜಾಲಹಳ್ಳಿ ಕ್ರಾಸ್‌ನಿಂದ ಚಿಕ್ಕಬಾಣಾವರ, ಅಬ್ಬಿಗೆರೆ ಕ್ರಾಸ್, ಗಂಗಮ್ಮ ಸರ್ಕಲ್ ಮೂಲಕ BEL ಸರ್ಕಲ್‌ವರೆಗೆ 4 ಬಸ್‌ಗಳು ನಿತ್ಯ 31 ಟ್ರಿಪ್ ಸಂಚರಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.