ಬೆಂಗಳೂರು : ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್, ಭಾರತದ ನೀರಜ್ ಚೋಪ್ರಾ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಬೇಟೆಯಾಡಿದ್ದಾರೆ. ನೀರಜ್ ಜೋಪ್ರಾ ಅವರು ಜಾವೆಲಿನ್ ಅನ್ನು 88.88 ಮೀಟರ್ ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಕುಮಾರ್ ಜೆನಾ 87.54 ಮೀಟ್ ದೂಐರ ಎಸೆಯುವ ಮೂಲಕ ಬೆಳ್ಳಿ ಗೆದ್ದಿದ್ದಾರೆ. ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ 2018ರಲ್ಲಿ ನೀರಜ್ ಜೋಪ್ರಾ 88.06 ಮೀಟ್ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.
ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಎಸೆತದಲ್ಲಿ ಕಣಕ್ಕಿಳಿದಿದ್ದರು. ಇಂದು ಚಿನ್ನ ಗೆಲ್ಲುವ ಮೂಲಕ ಈ ಬಾರಿ ಚಾಂಪಿಯನ್ ಪಟ್ಟ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ವಿಶ್ವ ಮಟ್ಟದಲ್ಲಿ ತಮ್ಮ ಪ್ರಮುಖ ಎದುರಾಳಿ, ಪಾಕಿಸ್ತಾನದ ನದೀಂ ಗಾಯಗೊಂಡು ಕೂಟದಿಂದ ಹೊರಬಿದ್ದಿರುವ ಕಾರಣ ನೀರಜ್ ಬಂಗಾರ ಗೆಲ್ಲುವ ಹಾದಿ ಸುಗಮಗೊಂಡಿತ್ತು.