ಮಹಾರಾಷ್ಟ್ರ : ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಳೆದ 48 ಗಂಟೆಗಳಲ್ಲಿ 31 ಜನರು ಸಾವಿಗೀಡಾಗಿದ್ದಾರೆ. ಈ ಸಾವುಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ, ಶಿವಸೇನೆ ಸಂಸದ ಹೇಮಂತ್ ಪಾಟೀಲ್ ಅವರು ಮಂಗಳವಾರ ಶಂಕರರಾವ್ ಚವ್ಹಾಣ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಅಲ್ಲಿ ಕೊಳಕಾಗಿರುವ ಶೌಚಾಲಯವನ್ನು ಕಂಡ ಪಾಟೀಲ್ ಅವರು ಆಸ್ಪತ್ರೆಯ ಡೀನ್ ಶ್ಯಾಮರಾವ್ ವಾಕೋಡೆ ಅವರನ್ನು ಕರೆದು ಅದನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ. ಡೀನ್ ಶೌಚಾಲಯವನ್ನು ತೊಳೆಯುತ್ತಿರುವಾಗ ಸಂಸದರು ನೀರಿನ ಪೈಪ್ ಹಿಡಿದಿರುವುದನ್ನು ವಿಡಿಯೋದಲ್ಲಿದೆ.
ಇದನ್ನೂ ಓದಿ:
ಕಂಟೇನರ್, ಬಾಟಲಿ ಮತ್ತು ಟಾಯ್ಲೆಟ್ ಬ್ರಷ್ ಅನ್ನು ಕಿಟಕಿಯ ಮೇಲೆ ಹಾಕುತ್ತಿರುವುದು ವಿಡಿಯೊದಲ್ಲಿದೆ. ನಂತರ ಪಾಟೀಲ್ ಅವರು ಶೌಚಾಲಯಕ್ಕೆ ನೀರನ್ನು ಸಿಂಪಡಿಸುವುದನ್ನು ಕಾಣಬಹುದು. ಇದರಲ್ಲಿ ವಾಕೋಡೆ ಅವರು ವೈಪರ್‌ನೊಂದಿಗೆ ಹಿಡಿದಿದ್ದು, ಕೊಳಕು ನೀರನ್ನು ಕಮೋಡ್‌ಗೆ ಬಿಡುವಂತೆ ಸಂಸದರು ಹೇಳುತ್ತಿದ್ದಾರೆ.