Saturday, November 23, 2024

ಮನೆ ಬಾಡಿಗೆ ಕೊಡುವ ನೆಪದಲ್ಲಿ ವಂಚನೆ!: ನೋ ಬ್ರೋಕರ್​.ಕಾಂ ವಿರುದ್ದ ದೂರು ದಾಖಲು

ಬೆಂಗಳೂರ: ನಗರದಲ್ಲಿ ಮನೆ ಬಾಡಿಗೆ ಕೊಡುವ ನೆಪದಲ್ಲಿ ವಂಚನೆಗಳು ಹೆಚ್ಚಾಗಿದ್ದು, ಲೀಸ್​​ಗೆ ಮನೆ ಕೊಡುತ್ತೇನೆ ಎಂದು ಬೇರೆಯವರ ಮನೆ ತೋರಿಸಿ ಮಹಿಳೆಗೆ 8 ಲಕ್ಷದ 30, ಸಾವಿರ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನೋ ಬ್ರೋಕರ್​​ನಲ್ಲಿ ಮನೆ ಲೀಸ್​​ಗೆ ಇರೋದನ್ನ ನೋಡಿದ ಮಹಿಳೆ ಅಲ್ಲಿದ್ದ ನಂಬರ್​​ಗೆ ಕಾಲ್ ಮಾಡಿದ್ದಾರೆ. ಅದಕ್ಕೆ ನೀವು ಕೇಳುವ ಮನೆ ಇಲ್ಲ. ಬೇರೆ ಮನೆ ಲೀಸ್​​ಗೆ ಇದೆ ಎಂದು ಆರೋಪಿ ಮೊಹಮದ್ ಸುಫಿಯಾನ್ ಹೇಳಿದ್ದ. ಕೆಂಪಾಪುರದ ಅಪಾರ್ಟ್ಮೆಂಟ್ ಮನೆ ತೋರಿಸಿ 10 ಲಕ್ಷಕ್ಕೆ ವ್ಯವಹಾರ ಡೀಲ್​​ ಮಾಡಿದ್ದ. ಆತನ ಮಾತು ನಂಬಿ ಮನೆ ನೋಡಿ ಇಷ್ಟಪಟ್ಟು ಟೋಕನ್ ಅಡ್ವಾನ್ಸ್ ಅಂತ 50 ಸಾವಿರ ನೀಡಿದ್ದಳು.

ಇದನ್ನೂ ಓದಿ: ನಟ ನಾಗಭೂಷಣ್ ಮೇಲೆ ಮತ್ತೊಂದು FIR

ಬಳಿಕ ಹಂತಹಂತವಾಗಿ ಒಟ್ಟು 8 ಲಕ್ಷದ 30, ಸಾವಿರ ಹಣವನ್ನ ಆರೋಪಿ ಹೇಳಿದ್ದ ಅಕೌಂಟ್​​ಗೆ ಕಳುಹಿಸಿದ್ದಾಳೆ. ಹಣ ತಲುಪಿದ ಮೇಲೆ ಮಹಿಳೆಗೆ ಮನೆ ಕೀ ಕೂಡ ಕೊಟ್ಟಿದ್ದ. ಆದರೆ ಮನೆ ಬೀಗ ತೆರೆಯಲು ಹೋದರೆ ಬೀಗ ತೆರೆಯಲು ಹೋದಾಗ ಅಸಲೀ ಸತ್ಯ ಬಯಲಿಗೆ ಬಂದಿದೆ.

ಮನೆಯ ಬಾಗಿಲು ತೆರೆಯಲು ಹೋದಾಗ ಅಪಾರ್ಟ್​ಮೆಂಟ್​ನ ಸೆಕ್ಯೂರಿಟಿ ಬಳಿ ವಿಚಾರಿಸಿದ್ದಾರೆ. ಈ ಮನೆಗೆ ಶ್ರೀನಿವಾಸ್ ಎಂಬ ಬೇರೆ ಓನರ್ ಇರುವುದಾಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಈ ಬಗ್ಗೆ ನೋ ಬ್ರೋಕರ್ ಡಾಟ್. ಕಾಂ ಸೇರಿದಂತೆ ಮೂವರ ವಿರುದ್ದ ಅಮೃತಹಳ್ಳಿ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES