Friday, November 22, 2024

ಕಾವೇರಿ ಕರ್ನಾಟಕ, ತಮಿಳುನಾಡು ಎರಡಕ್ಕೂ ಸೇರಿದ್ದು : ಚಕ್ರವರ್ತಿ ಸೂಲಿಬೆಲೆ

ಮಂಡ್ಯ : ರಾಜ್ಯವ್ಯಾಪಿ ನಡೆಯುತ್ತಿರುವ ಕಾವೇರಿ ಹೋರಾಟದ ಬಗ್ಗೆ ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಕಾವೇರಿ ನದಿ ಸ್ವಚ್ಛಗೊಳಿಸುತ್ತೇವೆ. ನಾವು ಕೇವಲ ಕಾವೇರಿ ಹೋರಾಟಕ್ಕೆ ಮಾತ್ರ ಬರುವ ಜನರಲ್ಲ, ಅದರ ಉಳಿವಿಗಾಗಿಯೂ ನಿರಂತರವಾಗಿ ಹೋರಾಟ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

ಕಾವೇರಿ ನೀರು ಕರ್ನಾಟಕ, ತಮಿಳುನಾಡು ಇಬ್ಬರಿಗೂ ಸೇರಿದ್ದು, ಬರಗಾಲ ಬಂದಾಗ ಕಾವೇರಿ ಸಮಸ್ಯೆ ಶುರುವಾಗುತ್ತದೆ. ಸಮಸ್ಯೆ ಬಂದಾಗ ಎರಡು ರಾಜ್ಯಗಳು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆದ್ರೆ, ದುರದೃಷ್ಟಕರ ವಿಚಾರವೆಂದರೆ ಪ್ರಾಧಿಕಾರ ಹೇಳುವ ಮುನ್ನವೇ ನೀರು ಹರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಕೆಲವರು ನನ್ನ ಬಗ್ಗೆ ಬೇಜವಾಬ್ದಾರಿ ಮಾತನಾಡ್ತಾರೆ : ಡಿ.ಕೆ ಶಿವಕುಮಾರ್

ಪ್ರಧಾನಿ ಹೇಗೆ ಬರಲು ಸಾಧ್ಯ?

ಕನ್ನಡದ ಮಣ್ಣಿನ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಇಬ್ಬರ ನಡುವೆ ಜಗಳ ನಡೆದರೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಡಿಸೋಕೆ ಬರಬೇಕು. ಆದರೆ, ಇಲ್ಲಿ ಜಗಳವೇ ಆಗಿಲ್ಲ. ಇನ್ನೂ ಪ್ರಧಾನಿ ಹೇಗೆ ಬರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES