ಬೆಂಗಳೂರು : ಕನ್ನಡ ಒಕ್ಕೂಟ ಕರೆ ನೀಡಿದ ಅಖಂಡ ಕರ್ನಾಟಕ ಬಂದ್ಗೆ ಯಶಸ್ಸಿಗೆ ರಾಜ್ಯದ ಜನತೆ ಗೌರವವನ್ನು ತಂದಿದ್ದಾರೆ ಇದಕ್ಕೆ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವದನ್ನು ವಿರೋಧಿಸಿ ಇಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಗೆ ನ್ಯಾಯದೇವತೆಯ ಸಂಕೇತ, ಬುರ್ಕಾದ ಸಂಕೇತ, ನೀರಿಗಾಗಿ ಪರದಾಡುತ್ತಿರುವ ಮಹಿಳೆಯ ಸಂಕೇತವಾಗಿ ಕಪ್ಪು ಬಟ್ಟಯನ್ನು ಧರಿಸಿ ಪ್ರತಿಭಟನೆ ಮಾಡುತ್ತಿದ್ದೇನೆ.
ಇದನ್ನೂ ಓದಿ: ತಮಿಳುನಾಡು ರೈತರಗಾಗಿ ನಮ್ಮ ರೈತರ ಜೀವನ ಹಾಳು ಮಾಡುವುದು ಸರಿಯಲ್ಲ : ನಟಿ ಪೂಜಾಗಾಂಧಿ
ಅಖಂಡ ಕರ್ನಾಟಕ ಬಂದ್ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೇ, ಸರ್ಕಾರದ ಅಸಹಕಾರ, ವಿರೋಧ, ಪೊಲೀಸರ ಒತ್ತಡ ಇಡೀ ಕರ್ನಾಟಕ ಪೊಲೀಸ್ ಇಲಾಖೆ ಬೆಂಗಳೂರು ಒಂದರಲ್ಲೇ 50 ಸಾವಿರ ಪೊಲೀಸ್ ನಿಯೋಜನೆ ಮಾಡಿ ಮತ್ತು ಇಡೀ ಕರ್ನಾಟಕಕ್ಕೆ ಲಕ್ಷಾಂತರ ಪೊಲೀಸರನ್ನು ನಿಯೋಜನೆ ಮಾಡಿ ಹಾಕಿ ನಮ್ಮ ಬಂದ್ ನ್ನು ಹತ್ತಿಕ್ಕಲು ಹುನ್ನಾರ ನಡೆಸುತ್ತಿದ್ದಾರೆ.
ಕನ್ನಡ ಒಕ್ಕೂಟ ಕರೆದ ಅಖಂಡ ಕರ್ನಾಟಕ ಬಂದ್ಗೆ ರಾಜ್ಯದ ಜನತೆ ಉತ್ತಮ ಪ್ರತಿಕ್ರಿಯೆ ನೀಡಿದ್ದು ಬಂದ್ ಯಶಸ್ಸಿಗೆ ಗೌರವವನ್ನು ತಂದಿದ್ದಾರೆ ಇದಕ್ಕೆ ನಾಡಿನ ಜನತೆಯನ್ನು ಅಭಿನಂದಿಸುತ್ತೇನೆ ಎಂದರು.
ಯಾವುದೇ ಕಾರಣಕ್ಕೂ ಕಾವೇರು ನೀರು ಬಿಡುವ ಪ್ರಶ್ನೆಯೆ ಇಲ್ಲ, ನಮ್ಮ ಕರವೇ ಮುಖಂಡರೂ ಕೂಡ ಇದಕ್ಕೆ ಸಾತ್ ನೀಡಿದ್ದಾರೆ. ನಮ್ಮ ಬಂದ್ ಗೆ ಅಡ್ಡಿಪಡಿಸಲು 144 ಸೆಕ್ಷನ್ ಜಾರಿ ಮಾಡಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ನಾಚಿಗೆಗೇಡು ನೀತಿ, ಇಬ್ಬಂದಿ ನೀತಿಯನ್ನು, ಗೃಹಸಚಿವರಾದ ಪರಮೇಶ್ವರ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅಸಹಕಾರ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡ.