Thursday, December 19, 2024

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎನ್.ಎಂ ಸುರೇಶ್ ಆಯ್ಕೆ

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್.ಎಂ. ಸುರೇಶ್ ಆಯ್ಕೆಯಾಗಿದ್ದಾರೆ.

2023-24ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಚುನಾವಣೆಯಲ್ಲಿ ಎನ್.ಎಮ್ ಸುರೇಶ್ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ ನಾಲ್ವರ ಪೈಕಿ ಎನ್.ಎಂ ಸುರೇಶ್ 337, ಶಿಲ್ಪಾ ಶ್ರೀನಿವಾಸ್ 217, ವಿ.ಹೆಚ್.ಸುರೇಶ್ (ಮಾರ್ಸ್ ಸುರೇಶ್) 181, ಎ.ಗಣೇಶ್ 204 ಮತಗಳನ್ನು ಗಳಿಸಿದ್ದಾರೆ. ಎನ್.ಎಮ್ ಸುರೇಶ್ 120 ಅಂತರದಿಂದ ಶಿಲ್ಪಾ ಶ್ರೀನಿವಾಸ್ ಎದುರು ಗೆದ್ದಿದ್ದಾರೆ.

ಪ್ರಮಿಳಾ ಜೋಷಾಯ್ ಉಪಾಧ್ಯಕ್ಷೆ

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ 307 ಮತಗಳಿಂದ ಗೆಲವು ಸಾಧಿಸಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್ ಜಿ, ಪ್ರದರ್ಶಕರ ವಲಯದಿಂದ ನರಸಿಂಹುಲು ಗೆಲುವು ಸಾಧಿಸಿದ್ದಾರೆ. ಗೌರವ ಕಾರ್ಯದರ್ಶಿ ನಿರ್ಮಾಪಕ ವಲಯದಿಂದ ಭಾ.ಮ. ಗಿರೀಶ್, ವಿತರಕರ ವಲಯದಿಂದ ಕರಿಸುಬ್ಬು, ಪ್ರದರ್ಶಕರ ವಲಯದಿಂದ ಸುಂದರ ರಾಜು ಜಯ ಗಳಿಸಿದ್ದಾರೆ. ಖಜಾಂಚಿಯಾಗಿ‌ ಜಯಸಿಂಹ‌ ಮುಸೂರಿ ಗೆಲುವು ಸಾಧಿಸಿದ್ದಾರೆ.

ನಿರ್ಮಾಪಕ, ಹಂಚಿಕೆದಾರ, ಪ್ರದರ್ಶಕ ಇತರ ವಲಯಗಳ ಸುಮಾರು 93 ಸ್ಥಾನಗಳಿಗೆ ಮತದಾನ ನಡೆದಿದ್ದು, ವಿವಿಧ ಸ್ಥಾನಗಳಿಗೆ ಒಟ್ಟು 158 ಅಭ್ಯರ್ಥಿಗಳು ಕಣದಲ್ಲಿದ್ದರು.

RELATED ARTICLES

Related Articles

TRENDING ARTICLES