ಮಂಡ್ಯ : ಸೋನಿಯಾ ಗಾಂಧಿ ಅವರನ್ನ ಮೆಚ್ಚಿಸಲು ಅಲ್ಲ ನೀವು ಇರುವುದು. ಸ್ಟಾಲಿನ್ ಅವರೇ ನಿಮ್ಮ ಮಂತ್ರಿಗಳನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಪೆನ್ನು ಪೇಪರ್ ಕೊಡಿ ಅಂದಿದ್ದರು. ನಾವು ರೈತರನ್ನು ಉಳಿಸುತ್ತಾರೆ ಅಂದುಕೊಂಡಿದ್ದೆ. ಆದರೆ, ನೀವೆ ಕೋರ್ಟ್ಗೆ ಹೋಗಿ ಅಂತ ನೀರಾವರಿ ಸಚಿವರು ಹೇಳಿದ್ದಾರೆ ಎಂದು ಗರಂ ಆದರು.
ಸರ್ವ ಪಕ್ಷದ ಸಭೆಯಲ್ಲೂ ನೀರು ಬಿಡಬೇಡಿ ಎಂದಿದ್ದೆ. ಕಳೆದ ಒಂದು ತಿಂಗಳು ನೀರು ನಿಲ್ಲಿಸಿದ್ದರೆ ರೈತರನ್ನ ಉಳಿಸಬಹುದಿತ್ತು. ಯಾವುದೇ ಕಾರಣಕ್ಕೂ ನೀರು ಬಿಡಬಾರದು. ನೀರು ಬಿಟ್ಟರೇ ಯಾವುದೇ ನ್ಯಾಯಾಂಗ ನಿಂದನೆಯಲ್ಲ. ರೈತರ ಪರ ತೆಗೆದುಕೊಂಡ ನಿರ್ಧಾರ ತೆಗೆದುಕೊಳ್ಳಿ. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನಿಮ್ಮ ಜೊತೆ ಇರುತ್ತೇವೆ ಎಂದು ತಿಳಿಸಿದರು.
ವಸೂಲಿ ಮಾಡಲು ಹೊರಟಿದ್ದೀರಿ
ಬೆಂಗಳೂರಿನಲ್ಲಿ ವಸೂಲಿ ಮಾಡಲು ಹೊರಟಿದ್ದೀರಿ ಅದನ್ನ ಮುಂದಕ್ಕೆ ಹಾಕಿ. ಸ್ಕ್ವೇರ್ ಫೀಟ್ಗೆ ವಸೂಲಿ ಮಾಡಲು ಹೊರಟಿದ್ದಾರೆ. ಕಾವೇರಿ ವಿಚಾರದಲ್ಲಿ ಮಂಗಳವಾರದ ಬೆಂಗಳೂರು ಬಂದ್ಗೆ ನಮ್ಮ ಬೆಂಬಲ ಇದೆ. ನೀರು ಬಿಟ್ಟರೇ ನೋಡಿ ನಮ್ಮ ನಡೆ ಏನಿರುತ್ತದೆ ಅಂತ. ನೀರು ಇದ್ದಾಗ ಡಬಲ್ ಬಿಟ್ಟಿದ್ದೇವೆ. ತಮಿಳುನಾಡಿನವರು ಎರಡು ಬೆಳೆ ಬೆಳೆಯುತ್ತಾರೆ. ಕಾವೇರಿ ಪರಿಸ್ಥಿತಿ ಬಗ್ಗೆ ಅಮಿತ್ ಶಾ ಬಳಿ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.
ಎಸಿಯಲ್ಲಿ ಕುಳಿತು ಆದೇಶ ಮಾಡುವುದಲ್ಲ
ಕೆಆರ್ಎಸ್ನಲ್ಲಿ ನೀರಿಲ್ಲ. ಈ ಸರ್ಕಾರ ವಾಟರ್ ಮ್ಯಾನೇಜ್ಮೆಂಟ್ ಅಥಾರಟಿ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುತ್ತಾರೆ. ಕೋರ್ಟ್ ಮುಂದೆ ಸರಿಯಾದ ಮಾಹಿತಿ ಕೊಟ್ಟಿಲ್ಲ. ಎಸಿಯಲ್ಲಿ ಕುಳಿತು ಆದೇಶ ಮಾಡುವುದಲ್ಲ ಎಂದು ಅಧಿಕಾರಿಗಳ ಮೇಲೆ ಕುಮಾರಸ್ವಾಮಿ ಗರಂ ಆದರು.