Friday, November 22, 2024

ನಾನು ಫೋಟೋ ಫಿಲ್ಟರ್ ಬಳಸುತ್ತಿದ್ದೇನೆ : ನಟಿ ಸಮಂತಾ

ಬೆಂಗಳೂರು : ಸ್ಟಿರಾಯ್ಡ್‌ ತೆಗೆದುಕೊಂಡ ಪರಿಣಾಮ ಚರ್ಮಕ್ಕೆ ಹಾನಿಯಾಗಿದೆ. ನಾನು ಫೋಟೋ ಫಿಲ್ಟರ್‌ ಬಳಸುತ್ತಿದ್ದೇನೆ ಎಂದು ಬಹುಭಾಷಾ ನಟಿ ಸಮಂತಾ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಸಮಂತಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವಾಗ ಸಮಂತಾ ಹೀಗೆ ಓಪನ್ ಆಗಿ ಉತ್ತರ ಕೊಟ್ಟಿದ್ದಾರೆ.

ನನ್ನ ಚರ್ಮ ಹೀಗೆ ಇಲ್ಲ. ಮೈಯೋಸಿಟಿಸ್‌ಗೆ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ತೆಗೆದುಕೊಂಡ ಸ್ಟಿರಾಯ್ಡ್‌ ಪರಿಣಾಮವಾಗಿ ಚರ್ಮಕ್ಕೆ ಹಾನಿಯಾಗಿದೆ. ಇದಕ್ಕಾಗಿ ನಾನು ಫಿಲ್ಟರ್‌ ಬಳಸುತ್ತಿದ್ದೇನೆ ಎಂದು ಸಮಂತಾ ಪ್ರಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES