ಚಾಮರಾಜನಗರ : ಕಾವೇರಿ ನೀರು ವಿಚಾರದ ಹಿನ್ನೆಲೆ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಖಾಲಿ ಮಡಕೆ ಒಡೆದು ಪ್ರತಿಭಟನೆ ಮಾಡುತ್ತಿರುವ ಘಟನೆ ಚಾಮರಾಜೇಶ್ವರ ದೇಗುಲ ಮುಂಭಾಗದಲ್ಲಿ ನಡೆಯುತ್ತಿದೆ.
ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕಂಡಿಸಿ ಚಾಮರಾಜನಗರದ ಕನ್ನಡಪರ ಸಂಘಟನೆಗಳಿಂದ ಖಾಲಿ ಮಡಕೆ ಹಿಡಿದು ಪ್ರತಿಭಟನೆ ಮಾಡುತ್ತಿದ್ದರೆ.
ಖಾಲಿ ಮಡಕೆಗಳನ್ನು ಹಿಡಿದು ಸುಪ್ರೀಂ ಕೋರ್ಟ್ನ ತೀರ್ಪುನ್ನು ಹಾಗೂ ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರದ ಘೋಷಣೆಯನ್ನು ಕೂಗುತ್ತ, ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದವರಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದರೆ.
ಇದನ್ನು ಓದಿ : ಕನ್ನಡ ಪರ ಸಂಘಟನೆಯ ಕಾರ್ಯಕರ್ತರು
ಅಷ್ಟೇ ಅಲ್ಲ ಕರ್ನಾಟಕಕ್ಕೆ ನೀರು ತಮಿಳುನಾಡಿಗೆ ಹಾಗೂ ತಮಿಳುನಾಡು ನಾಶವಾಗಲಿ, ಸುಪ್ರೀಂ ಕೋರ್ಟ್ ತೀರ್ಪಿಗೆ ಧಿಕ್ಕಾರ ಹಾಗೂ ಆ ತಮಿಳುನಾಡು ಸತ್ತು ಹೋಗಿದೆ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ರಾಷ್ರೀಯ ಹೆದ್ದಾರಿಯಲ್ಲಿ ಖಾಲಿ ಮಡಕೆಗಳನ್ನು ಒಡೆದು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದಾರೆ.