Wednesday, October 30, 2024

ಮೊಹಮ್ಮದ್ ಸಿರಾಜ್​​ ವಿಶ್ವದ ನಂ.1 ಬೌಲರ್!

ಮುಂಬೈ: ICC ನೂತನ ಏಕದಿನ ಬೌಲರ್​ಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನ ಅಲಂಕರಿಸಿರುವುದು ವಿಶೇಷ.

ಏಷ್ಯಾಕಪ್​ ಫೈನಲ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಸಿರಾಜ್ 7 ಓವರ್​ಗಳಲ್ಲಿ 21 ರನ್​ ನೀಡಿ 6 ವಿಕೆಟ್ ಕಬಳಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ 8 ಸ್ಥಾನ ಮೇಲೇರಿದ್ದಾರೆ. ಅಂದರೆ ಕಳೆದ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ 9ನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ : ಮಹಿಳೆಯರ ಉಚಿತ ಬಸ್‌ ಪ್ರಯಾಣ ಸ್ಕೀಂಗೆ 100 ದಿನ!

ಇದೀಗ ಏಕಾಏಕಿ ಮೇಲೇರಿ ಅಗ್ರಸ್ಥಾನಕ್ಕೆ ತಲುಪಿರುವುದು ವಿಶೇಷ. ಈ ಮೂಲಕ ಒಟ್ಟು 694 ರೇಟಿಂಗ್ ಪಡೆದು ಅಗ್ರಸ್ಥಾನ ಅಲಂಕರಿಸಿದ್ದಾರೆ.

RELATED ARTICLES

Related Articles

TRENDING ARTICLES