Saturday, May 18, 2024

ಮಹಿಳೆಯರ ಉಚಿತ ಬಸ್‌ ಪ್ರಯಾಣ ಸ್ಕೀಂಗೆ 100 ದಿನ!

ಬೆಂಗಳೂರು : ರಾಜ್ಯ ಸರ್ಕಾರ ಕಳೆದ ಜೂನ್‌ನಲ್ಲಿ ಜಾರಿಗೊಳಿಸಿದ್ದ ಮೊದಲ ಗ್ಯಾರಂಟಿ ‘ಶಕ್ತಿ’ಯೋಜನೆ 100 ದಿನಗಳನ್ನು ಪೂರೈಸಿದೆ. ಈ 100 ದಿನಗಳಲ್ಲಿ ರಾಜ್ಯ ರಸ್ತೆ ಸಾರಿಗೆಯಲ್ಲಿ 62.55 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಶಕ್ತಿ ಪ್ರಯಾಣಿಸಿದ್ದಾರೆ.

ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಪ್ರಯಾಣದ ದರದ ಮೊತ್ತ 1456 ಕೋಟಿ ರು. ನಷ್ಟು ನಷ್ಟವಾಗಿದೆ. 5 ಗ್ಯಾರಂಟಿಗಳ ಭರವಸೆಯೊಂದಿಗೆ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ ಮಹಿಳೆಯರಿಗೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಉಚಿತ ಸಂಚಾರದ ‘ಶಕ್ತಿ’ ಗ್ಯಾರಂಟಿ ಯೋಜನೆಗೆ ಜೂ.11ರಂದು ಚಾಲನೆ ನೀಡಿತ್ತು.

ಇದನ್ನೂ ಓದಿ: ಗಣೇಶ ವಿಸರ್ಜನೆಯಲ್ಲಿ ನಟ ಧ್ರುವ ಸರ್ಜಾ ಭಾಗಿ! ಅಭಿಮಾನಿಗಳು ಫುಲ್​ ಖುಷ್​

ಅಲ್ಲಿಂದ ಸೆ.19ರವರೆಗೆ ರಾಜ್ಯದ ಮಹಿಳಾ ಪ್ರಯಾಣಿಕರು ಸರ್ಕಾರದ ವಿವಿಧ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ 62,55,39,727 (62.5 ಕೋಟಿ) ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಪ್ರಯಾಣದ ಮೊತ್ತ 1456,09,64867 ರು. (1456 ಕೋಟಿ ರು.)ಗಳಾಗಿದೆ.

RELATED ARTICLES

Related Articles

TRENDING ARTICLES