ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದ್ದು. ಈ ಬಾರಿ ದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೆ ಹೆಚ್ಚಾಗಿ ಕಾಡುತ್ತಿದೆ.
ಬೆಂಗಳೂರಲ್ಲಿ ವರುಣನ ಕಣ್ಣಾಮುಚ್ಚಾಲೆ ಆಟ, ಡೆಂಘಿ ಜ್ವರ ವ್ಯಾಪಿಸಲು ಕಾರಣವಾಗುತ್ತಿದೆ. ದೊಡ್ಡವರಿಗಿಂತ ಮಕ್ಕಳಲ್ಲಿ ಹೆಚ್ಚು ಡೆಂಘಿ ಜ್ವರ ಕಾಣಿಸಿಕೊಳ್ತಿದ್ದು ಆರೋಗ್ಯ ಇಲಾಖೆಗೆ ಸಮಸ್ಯೆಯಾಗಿ ಕಾಡುತ್ತಿದೆ. ಬೆಂಗಳೂರು ನಗರದಲ್ಲಿ ಶೇಕಡಾ 10-15 ರಷ್ಟು ಮಕ್ಕಳಲ್ಲಿ ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ನೀಡಿದ್ರಾ ಕ.ವಿ.ಪ್ರ.ನಿ EE?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೂರು ಪಟ್ಟು ಪ್ರಕರಣಗಳು ಹೆಚ್ಚಳವಾಗಿದ್ದು, ಮಕ್ಕಳಲ್ಲಿ ಫ್ಲೂಯಿಡ್ ಆಕ್ಯುಮಿನೇಷನ್ ಕಡಿಮೆಯಾಗುತ್ತಿದೆಯಂತೆ.