Thursday, December 19, 2024

ಶ್ರೀಲಂಕಾ ವಿರುದ್ದ ಭರ್ಜರಿ ಗೆಲುವು: ಏಷ್ಯಾಕಪ್​ ಮುಡಿಗೇರಿಸಿಕೊಂಡ ಭಾರತ!

ಕೊಲಂಬೊ: ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತದ ಭರ್ಜರಿ ಜಯಗಳಿಸಿದ್ದು 6.1 ಓವರ್​ನಲ್ಲಿ ಟಾರ್ಗೆಟ್​ ರೀಚ್​ ಮಾಡುವ ಮೂಲಕ  8 ನೇ ಏಷ್ಯಾಕಪ್​ ನ್ನು ತನ್ನ ಖಾತೆಗೆ ಸೇರ್ಪಡೆಗೊಳಿಸಿಗೊಂಡಿದೆ.

ಶ್ರೀಲಂಕಾ ತವರು ನೆಲದಲ್ಲಿ ನಡೆದ 8 ನೇ ಆವೃತ್ತಿಯ ಏಷ್ಯಾಕಪ್ ಫೈನಲ್​ ಪಂದ್ಯದಲ್ಲಿ​​ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ 50 ರನ್ ಗಳಿಗೆ ಆಲೌಟ್ ಆಗಿದ್ದು. ಇದು ಏಷ್ಯಾಕಪ್ ನಲ್ಲಿ ಅತ್ಯಂತ ಕಳಪೆ ಮೊತ್ತವಾಗಿದೆ.

ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಮಾರಕವಾಗಿ ಕಾಡಿದರು. ಹೀಗಾಗಿ ಲಂಕಾ 50 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ 51 ರನ್ ಗಳ ಗುರಿ ನೀಡಿತ್ತು.

ಈ ಸಾಧರಣ ಮೊತ್ತವನ್ನು ಬೆನ್ನುಹತ್ತಿದ ಭಾರತ ತಂಡ ಯಾವುದೇ ನಷ್ಟವಿಲ್ಲದೇ 6.1 ಓವರ್​ ನಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 8 ನೇ ಏಷ್ಯಾಕಪ್​ನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.

RELATED ARTICLES

Related Articles

TRENDING ARTICLES