ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವನ್ನು ಕನ್ಯಾ ಸಂಕ್ರಾಂತಿ ಎಂದು ಹೇಳಲಾಗುತ್ತದೆ. ಕನ್ಯಾ ಸಂಕ್ರಮಣವು ಶಶಿಯು ಮಂಗಳ ಯೋಗದಲ್ಲಿ ಪ್ರಾರಂಭವಾಗುವುದರಿಂದ ಸಾರ್ವಜನಿಕ ಜೀವನದ ಮೇಲೆ ಹಾಗೂ ಜಾಗತಿಕವಾಗಿ ಭಾರಿ ಪರಿಣಾಮ ಉಂಟಾಗಲಿದೆ. ಕನ್ಯಾ ಸಂಕ್ರಮಣ ಸೆಪ್ಟೆಂಬರ್ 17 ರ ಮಧ್ಯಾಹ್ನ 1.23 ರಿಂದ ಸಂಜೆ 05.43 ರ ವರೆಗೆ ಮಹಾಪುಣ್ಯಕಾಲವಾಗಿರುತ್ತದೆ. ಪುಣ್ಯಕಾಲ ಮಧ್ಯಾಹ್ನ 1.23 ರಿಂದ ಸಂಜೆ 6.27 ರ ವರೆಗೂ ಇರುತ್ತದೆ.
ಈ ದಿನ ಸರ್ವಾರ್ಥ ಸಿದ್ದಯೋಗ, ಅಮೇತಸಿದ್ದಿಯೋಗ ಇರುವುದರಿಂದ ಸರ್ವಕಾರ್ಯಗಳಿಗೂ ಪ್ರಶಸ್ತವಾಗಿದೆ.
ಕನ್ಯಾ ಸಂಕ್ರಮಣದಂದು ಏನನ್ನು ಮಾಡಬೇಕು ಗೊತ್ತಾ?
ಕನ್ಯಾ ಸಂಕ್ರಾಂತಿಯು ಷೇರು ಮಾರುಕಟ್ಟೆಯ ಮೇಲೆ ಯಾವ ಪರಿಣಾಮ ಬೀರುವುದು ಗೊತ್ತಾ?
ಕನ್ಯಾ ಸಂಕ್ರಾಂತಿಯು ಶಶಿ-ಮಂಗಳ ಯೋಗದಲ್ಲಿ ಪ್ರಾರಂಭವಾಗಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಏರುವಿಕೆಯನ್ನು ನೋಡಬಹುದು. ಜಾಗತಿಕ ಷೇರು ಮಾರುಕಟ್ಟೆಯಲ್ಲೂ ಏರುವಿಕೆ ಉಂಟಾಗುತ್ತದೆ.