ಗದಗ : ಡಾಬಾ ಒಂದರಲ್ಲಿ ಇಬ್ಬರೂ ಸಿಡಿಪಿಒ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ರೋಣ ಪಟ್ಟಣದ ಸಿಡಿಪಿಒ ಬಸಮ್ಮ ಹೂಲಿ ಹಾಗೂ ಸಿಬ್ಬಂದಿ ಎಫ್ಡಿಸಿ ಜಗದೀಶ್ ಎಂಬುವರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಕೆಡವಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅನಿಲಕುಮಾರ ಎಂಬುವವರ ಅಂಗನವಾಡಿ ಸಾಮಗ್ರಿ ಬಿಲ್ ಕ್ಲೀಯರ್ ಮಾಡಲೆಂದು ಸಿಡಿಪಿಒ ಬಸಮ್ಮ ಮತ್ತು ಸಿಬ್ಬಂದಿ ಅವರು ನಲವತ್ತು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಡಾಬಾ ಒಂದರಲ್ಲಿ ಅನಿಲಕುಮಾರ ಎಂಬುವನು ನಲವತ್ತು ಲಕ್ಷ ಬಿಲ್ ಕ್ಲೀಯರ್ ಮಾಡಲು ಒಂದೂವರೆ ಲಕ್ಷ ಲಂಚ ಕೊಡಲು ಬಂದಿದ್ದನು. ಈ ವೇಳೆ ಅಧಿಕಾರಿಗಳಿಗೆ ಖಚಿತ ಮಾಹಿತಿ ದೊರಕಿದ್ದು, ಸಿಡಿಪಿಒ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನು ಓದಿ : ಗೌರಿ-ಗಣೇಶ ಹಬ್ಬ; ಬಸ್ಗಳಲ್ಲಿ ಹೌಸ್ ಫುಲ್ ಆಗ್ತಿರೋ ಪ್ರಯಾಣಿಕರು
ಲೋಕಾಯುಕ್ತದಲ್ಲಿ ಮೊದಲೇ ದಾಖಲಾದ ದೂರಿನನ್ವಯ ಸಿಡಿಪಿಒ ಮೇಲೆ ಅಧಿಕಾರಿಗಳು ತಮ್ಮ ಬಲೆಗೆ ಕೆಡವಿದ್ದಾರೆ. ಈ ವಿಚಾರದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ರೋಣ ಪಟ್ಟಣಕ್ಕೆ ಕರೆದೊಯ್ದ ಅಧಿಕಾರಿಗಳು. ಲಂಚ ಪಡೆದ ಇವರಿಬ್ಬರ ಮೇಲೆ ಗದಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.