ಬೆಂಗಳೂರು : ಆದಿತ್ಯ ಎಲ್1 (Aditya-L1 Mission) ಬಗ್ಗೆ ಇಸ್ರೋ (ISRO) ವಿಜ್ಞಾನಿಗಳು ಬಿಗ್ ಅಪ್ಡೇಟ್ ನೀಡಿದ್ದು, ಸೆ.19ರಂದು ಆದಿತ್ಯ ಎಲ್1 ಭೂಮಿಗೆ (Earth) ವಿದಾಯ ಹೇಳಲಿದೆ.
ಸೂರ್ಯನ ಮೇಳಿನ ಸಂಶೋಧನೆಗಾಗಿ ಉಡಾವಣೆ ಮಾಡಲಾಗಿರುವ ಆದಿತ್ಯ ಎಲ್1 ಭೂಮಿಯ ನಾಲ್ಕನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಇಸ್ರೋ ಪ್ರಕಟಿಸಿದೆ.
ಈಗ ಆದಿತ್ಯ ಎಲ್1 ಉಪಗ್ರಹವು 256 x 1,21,973 ಕಿ.ಮೀ ಕಕ್ಷೆಯನ್ನು ಪ್ರವೇಶಿಸಿದೆ. ಸೆಪ್ಟಂಬರ್ 19ರಂದು ಬೆಳಗಿನ ಜಾವ 2 ಗಂಟೆಗೆ ಆದಿತ್ಯ ಎಲ್1 ಉಪಗ್ರಹವು ಮುಂದಿನ ಕಕ್ಷೆಯ ಉತ್ತೇಜನದೊಂದಿಗೆ ಭೂಮಿಗೆ ವಿದಾಯ ಹೇಳುತ್ತದೆ. ಅಲ್ಲದೆ, ಲ್ಯಾಗ್ರೇಜನ್ ಪಾಯಿಂಟ್ 1ರ ಕಡೆಗೆ ಪ್ರಯಾಣ ಬೆಳೆಸುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
Aditya-L1 Mission:
The third Earth-bound maneuvre (EBN#3) is performed successfully from ISTRAC, Bengaluru.ISRO's ground stations at Mauritius, Bengaluru, SDSC-SHAR and Port Blair tracked the satellite during this operation.
The new orbit attained is 296 km x 71767 km.… pic.twitter.com/r9a8xwQ4My
— ISRO (@isro) September 9, 2023