ಹಾಸನ : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರದ ಹಿನ್ನೆಲೆ ಮಾಜಿ ಶಾಸಕ ಪ್ರೀತಂಗೌಡ ಅವರು ಮಾಧ್ಯಮಗಳ ಮೂಲಕ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಾಜಿ ಶಾಸಕ ಪ್ರೀತಂಗೌಡ ಅವರು ಮೈತ್ರಿ ಬಗ್ಗೆ ಬಿಜೆಪಿಯ ಯಾವುದೇ ಮುಖಂಡರು ಅಥವಾ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿರುವ ನಾಯಕರಾರೂ ಕೂಡ ಮೈತ್ರಿ ಅಂತಾ ಹೇಳಿಲ್ಲ, ಮೈತ್ರಿ ಅಂತಾ ಹೇಳಿರೋದು ಯಾರು ಅಂತ ಸ್ವಲ್ಪ ಗಮನಿಸಬೇಕು ಎಂದು ಅಸಮಧಾನವನ್ನು ವ್ಯಕ್ತಪಡಿಸಿದರು.
ಅದು ಯಾರಿಗೋ ಒಬ್ಬರಿಗೆ ಕಷ್ಟ ಇದೆ, ಆ ಕಷ್ಟದಿಂದ ಪರಿಹಾರ ಆಗೋದಕ್ಕೆ ಮೈತ್ರಿ ಅಂತಾ ಅನೌನ್ಸ ಮಾಡ್ತಾರೆ ಅಷ್ಟೇ. ನಮ್ಮ ನರೇಂದ್ರ ಮೋದಿಯವರು ಮತ್ತೋಮ್ಮೆ ಪ್ರಧಾನಿ ಆಗಲಿ ಎಂದು ತಪಸ್ಸು ಮಾಡುತ್ತಿರುವರಲ್ಲಿ ನಾನು ಒಬ್ಬ, ಮೋದಿಯವರು ಪ್ರಧಾನಿ ಆಗಲಿ ಅಂತಾ ಬಂದ್ರೆ ನಮ್ಮ ಪಕ್ಷದಲ್ಲಿ ಎಲ್ಲರಿಗೂ ಸ್ವಾಗತವಿದೆ ಎಂದು ಹೇಳಿದರು. ಮೈತ್ರಿಯನ್ನು ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಹಾಗೂ ನಮ್ಮ ಪಕ್ಷ ಉಳಿಸಿಕೊಳ್ಳಬೇಕು ಅಂತಾ ಪ್ರಸ್ತಾಪ ಮಾಡಿ ಮಾತನಾಡಿದ್ರು ಅಷ್ಟೇ ಬೇರೆ ಏನಿಲ್ಲ ಎಂದು ಹೇಳಿದರು.
ಇದನ್ನು ಓದಿ : KRS ಡ್ಯಾಂ ನೀರು ಬಿಡುಗಡೆ; ಕಾವೇರಿ ಜಲಾಶಯ ಪಾತ್ರದ ಜನರಿಗೂ ಹೆಚ್ಚಿದ ಆತಂಕ
ಹೇಳಬೇಕು ಅಂದರೆ ಜೆಡಿಎಸ್ ಕಾರ್ಯಕರ್ತರನ್ನು, ಅವರ ಪಕ್ಷವನ್ನು ಉಳಿಸಿಕೊಳ್ಳೋದಕ್ಕೆ ಮೈತ್ರಿ ಅನಿವಾರ್ಯ ಇದೆ ಎಂದು ಹೇಳಿದ್ದಾರೆ, ಆದರೆ ಆ ಮೈತ್ರಿಯ ಅವಶ್ಯಕತೆ ಬಿಜೆಪಿಯವರಿಗೆ ಇಲ್ಲ. ಮೋದಿಯವರು ಪ್ರಧಾನಿ ಆಗಬೇಕು ಅಂತಾ ಬಂದ್ರೆ, ಶತ್ರುಗಳಾದ್ರು ಸರಿ ಅವರನ್ನು ಅಪ್ಪಿಕೊಳ್ಳುತ್ತೇವೆ, ಅದು ಬಿಟ್ಟು ಆ ಮತ್ಲಬಿ ರಾಜಕಾರಣದ ಅವಶ್ಯಕತೆ ಬಿಜೆಪಿಗೆ ಇಲ್ಲ. ಅವರು 28 ಸ್ಥಾನಗಳಲ್ಲಿಯೂ ಬಿಜೆಪಿ ನಿಲ್ಲಲಿ, ನಿಮಗೆ ಸಹಾಯ ಮಾಡ್ತೀವಿ ಎಂಬ ಉದಾರತೆಯನ್ನು ಇಟ್ಕೊಂಡು ಬಂದರೆ ಅದಕ್ಕೆ ಒಪ್ಪುತ್ತೇವೆ.
ನಮ್ಮ ಪಕ್ಷ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡ್ತಾ ಇದ್ದೇವೆ, ಹಾಸನದಲ್ಲಿ ಯಾರು ಅಭ್ಯರ್ಥಿ ಆಗ್ತಾರೊ, ಅವರ ಕುಟುಂಬದವರು ಅಭ್ಯರ್ಥಿ ಆಗ್ತಾರೆ. ಕುಟುಂಬ ರಾಜಕಾರಣದ ವಿರುದ್ಧ ರಾಜಕಾರಣ ಮಾಡಬೇಕಾದ್ರೆ, ಅವರು ಮೋದಿ ಸಾಹೇಬ್ರು ಪ್ರಧಾನಿ ಆಗಬೇಕು ಅಂತಾ ಬಂದಿದ್ರೆ ಬಿಡಪ್ಪಾ ಜೆಡಿಎಸ್ ಅವರು ಬದಲಾಗಿದ್ದಾರೆ ಅಂತಾ ಒಪ್ಪಿಕೊಳ್ತಾ ಇದ್ವಿ. ಅದನ್ನು ಬಿಟ್ಟು ಅವರ ಕಾರ್ಯಕರ್ತರನ್ನ ಮತ್ತು ಅವರ ಪಕ್ಷವನ್ನು ಉಳಿಸಿಕೊಳ್ಳಲು ಅಂದ್ರೆ ನಾನು ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷ ಉಳಿಸೋದಕ್ಕೆ ನಾವ್ಯಾಕೆ ಸಹಕಾರ ಮಾಡಬೇಕು?, ಯಾವುದೇ ಕಾರಣಕ್ಕೂ ಅದು ಆಗಲ್ಲ ಎಂದು ಜೆಡಿಎಸ್ ಅವರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.