Saturday, April 19, 2025

ಮೈತ್ರಿ ವಿಲವಿಲ.. ಕಳೆದ ವಾರ ಕೊಟ್ಟ ಹೇಳಿಕೆ ವಾಸ್ತವಿಕ ಸಂಗತಿ ಅಲ್ಲ : ಬಿಎಸ್​ವೈ ಯೂಟರ್ನ್

ನವದೆಹಲಿ : ಕಳೆದ ವಾರ ಕೊಟ್ಟ ಹೇಳಿಕೆ ವಾಸ್ತವಿಕ ಸಂಗತಿ ಅಲ್ಲ. ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಯೂಟರ್ನ್ ಹೊಡೆದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್​ ಮೈತ್ತಿ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮನಸ್ಸಿನಲ್ಲಿ ಏನಿದೆ ಅನ್ನೊದು ಗೊತ್ತಿಲ್ಲ. ಮೈತ್ರಿ ವಿಚಾರ ಮಾತುಕತೆ ಹಂತದಲ್ಲಿದೆ. ಮೈತ್ರಿಗೆ ಹೈ ಕಮಾಂಡ್ ಒಪ್ಪಿದ್ರೆ, ಸೀಟು ಬಿಟ್ಟು ಕೊಡುವ ವಿಚಾರ. ಎಷ್ಟು ಸೀಟು ಬಿಟ್ಟು ಕೊಡಬೇಕು ಅಂತ ಹೈ ಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯಗೆ ಈಗಾಗಲೇ ಹೇಳಿದ್ದೇನೆ

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಾಜ್ಯದ ಯಾವುದೇ ಜಲಾಶಯಗಳಲ್ಲಿ ನೀರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಹೇಳಿದ್ದೇನೆ. ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ. ಇಂದಿನ ಸರ್ವ ಪಕ್ಷಗಳ ಸಭೆಯಲ್ಲಿ ಭಾಗಿಯಾಗಬೇಕಿತ್ತು. ದೆಹಲಿ ಪ್ರವಾಸ ಹಿನ್ನೆಲೆ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES