ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ತೆರಳುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಟೈಮ್ ಇದೆ ಬ್ರದರ್.. ಗೌರಿ-ಗಣೇಶ ಹಬ್ಬವೆಲ್ಲ ಆಗಲಿ.. ಆಮೇಲೆ ನೋಡೋಣ ಎಂದು ಹೇಳಿದ್ದಾರೆ.
ಬೇರೆ ಪಕ್ಷಗಳ ಜೊತೆ ಹೋದ್ರೆ ಮಾನ ಮರ್ಯಾದೆ ಇದ್ಯಾ ಅಂತ ಕೇಳ್ತೀರಲ್ಲ. ನಿಮಗೇನಾದ್ರೂ ಮಾನ ಮರ್ಯಾದೆ ಇದ್ಯಾ ಸಿದ್ದರಾಮಯ್ಯನವರೇ? ಅಟ್ರಾಸಿಟಿ ಕೇಸ್ ಹಾಕಿದ್ದಾರೆ. ಅಧಿಕಾರಿಗಳಿಗೆ ಎಷ್ಟು ಗಂಟೆಗೆ ಫೋನ್ ಮಾಡಿದ್ರಿ? ಯಾರು ಆ ಅಧಿಕಾರಿ, ಮೊದಲು ಅಮಾನತು ಅಂತ ಮಾತಾಡಿದ್ದೀರಿ. ಇದೇನಾ ನೀವು ದಲಿತರ ಪರ ಅಂತ ಹೇಳೋದು? ಎಂದು ಗುಡುಗಿದ್ದಾರೆ.
ಮಚ್ಚು ಹಿಡಿಯೋಕಾ ವೋಟ್ ಹಾಕಿದ್ದು?
ದಲಿತ ರಕ್ಷಣೆ, ಭೂಮಿ ರಕ್ಷಣೆ ಅಂತಿರಿ, ಇದೇ ನೀವು ಮಾಡೋ ಕೆಲಸ. ಈ ವ್ಯವಹಾರ ಮಾಡಬೇಕಾದ್ರೆ ಆ ಮಂತ್ರಿ ಬಿಜೆಪಿಯಲ್ಲಿದ್ರೋ, ಕಾಂಗ್ರೆಸ್ ನಲ್ಲಿದ್ರೋ ಗೊತ್ತಿಲ್ಲ. ಕಾನೂನು ವಿರುದ್ಧವಾದ ಜೀವ ಭೂಮಿಗೆ ಕೊಟ್ಟಿದ್ರಾ? ಇದೇ ಕೃಷ್ಣ ಭೈರೇಗೌಡರು ನಮ್ಮ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಆಯ್ಕೆ ಆದ್ರಲ್ಲ ಅವ್ರನ್ನ ಕಲಾಪದಲ್ಲಿ ಯಾವ ರೀತಿ ಬಿಜೆಪಿ ಆಕ್ರಮಣ ಮಾಡೋಕೆ ಹೊರಟ್ರು ಅಂತ ಏನೆಲ್ಲ ಮಾತಾಡಿದ್ರಿ. ಈಗ ಇಬ್ಬರು ದಲಿತ ಮಹಿಳೆಯರ ಮೇಲೆ ಮಚ್ಚು ಹಿಡಿದುಕೊಂಡು ಹೋಗಿದ್ದೀರಿ. ಮಚ್ಚು ಹಿಡಿದುಕೊಂಡು ಹೋಗೋಕಾ ಜನರು ನಿಮಗೆ ವೋಟ್ ಹಾಕಿರೋದು?ಎಂದು ವಾಗ್ದಾಳಿ ನಡೆಸಿದ್ದಾರೆ.