ಬೆಂಗಳೂರು : ಕಾವೇರಿ ನದಿ ನೀರು ವಿಚಾರದಲ್ಲಿ ಮತ್ತೆ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿದೆ.
ಮುಂದಿನ 15 ದಿನಗಳ ಕಾಲ 5,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಮಂಡಳಿ ಸೂಚಿಸಿದೆ.
ಇಂದು ಕೇವೇರಿ ನಿಯಂತ್ರಣ ಸಮಿತಿ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸಮಿತಿ ಈ ಆದೇಶ ಹೊರಡಿಸಿದೆ. ಈ ಹಿಂದೆ ಸೆಪ್ಟಂಬರ್ 12ರವರೆಗೆ ಪ್ರತಿನಿತ್ಯ 5,000 ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ನಿರ್ದೇಶಕ ನೀಡಿತ್ತು. ಇದೀಗ ಮತ್ತೆ ರಾಜ್ಯಕ್ಕೆ ಬಿಗ್ ಶಾಕ್ ನೀಡಿದೆ.
ಕೆಆರ್‌ಎಸ್ ನೀರಿನ ಮಟ್ಟ ಎಷ್ಟಿದೆ?
- ಗರಿಷ್ಠ ಮಟ್ಟ: 2,468.80 ಅಡಿ
- ಗರಿಷ್ಠ ಮಿತಿ : 49.452 ಟಿಎಂಸಿ
- ಇಂದಿನ ಮಿತಿ : 21 TMC
- ಡೆಡ್ ಸ್ಟೋರೇಜ್ : 2 TMC
- ಉಳಿಯಲಿರುವ ನೀರಿನ ಪ್ರಮಾಣ : 19 TMC
- 15 ದಿನ ತಮಿಳುನಾಡಿಗೆ ಬಿಡಬೇಕಾದ ನೀರು : 7 TMC
- ಕೆಆರ್ಎಸ್ನಲ್ಲಿ ಉಳಿಯಲಿರುವ ನೀರು : 12 TMC
- ಪ್ರತಿ ತಿಂಗಳು ಬೆಂಗಳೂರಿಗೆ ಬೇಕಿರುವ ನೀರು : 1.6 TMC