ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಬ್ಲೂ ಬಾಯ್ಸ್ ಬದ್ಧ ವೈರಿ ಪಾಕಿಗಳ ಹುಟ್ಟಡಗಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅವರ ಸ್ಫೋಟಕ ಶತಕದ ನೆರವಿನಿಂದ ಪಾಕಿಸ್ತಾನಕ್ಕೆ 357 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ನಿನ್ನೆ ಆರಂಭಿಕ ಆಟಗಾರರಾದ ಶುಭುನ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮಾ ಪಾಕ್ ಬೌಲರ್ಗಳನ್ನು ದಂಡಿಸಿದರು. ರೋಹಿತ್ (56) ಹಾಗೂ ಗಿಲ್ (58) ಅವರ ಅರ್ಧಶತಕದ ನೆರವಿನಿಂದ ಭಾರತ ಬೊಂಬಾಟ್ ಆರಂಭ ಪಡೆಯಿತು. ಅರ್ಧಶತಕದ ಬಳಿಕ ಇಬ್ಬರೂ ಪೆವಿಲಿಯನ್ನತ್ತ ಹೆಜ್ಜೆಹಾಕಿದರು. ಆ ಬಳಿಕ ಪ್ರೇಮದಾಸ ಕ್ರೀಡಾಂಗಣದಲ್ಲಿ ವಿರಾಟ್ ಹಾಗೂ ರಾಹುಲ್ ಸ್ಫೋಟಿಸಿದರು.
47ನೇ ಶತಕ ಸಿಡಿಸಿದ ವಿರಾಟ್
ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಪಾಕ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. 84 ಎಸೆತಗಳಲ್ಲಿ 6 ಬೌಂಡಿರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನೊಂದಿಗೆ ವಿರಾಟ್ ಕೊಹ್ಲಿ ವಿದ್ವಂಸಕ ಶತಕ ಸಿಡಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 47ನೇ ಶತಕ. ಇತ್ತ, ಕನ್ನಡಿಗ ಕೆ.ಎಲ್ ರಾಹುಲ್ 100 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಬೊಂಬಾಟ್ ಸಿಕ್ಸರ್ನೊಂದಿಗೆ ಆಕರ್ಷಕ ಶತಕ ಬಾರಿಸಿದರು. ಇದು ಅವರ 6ನೇ ಶತಕವಾಗಿದೆ.