Friday, November 22, 2024

ಕೊಹ್ಲಿ 50*.. ಬದ್ದ ವೈರಿಗಳ ವಿರುದ್ಧ ವಿರಾಟ್ ‘ವಿಶ್ವರೂಪ’

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಬ್ಲ್ಯೂ ಬಾಯ್ಸ್​ ಅಬ್ಬರಿಸಿ, ಬೊಬ್ಬಿರಿಸುತ್ತಿದ್ದಾರೆ.

ನಿನ್ನೆ ಯಂಗ್ ಗನ್ ಶುಭುನ್ಮನ್ ಗಿಲ್ ಹಾಗೂ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಪಾಕ್ ಬೌಲರ್​ಗಳನ್ನು ಬೆಂಡೆತ್ತಿದ್ದರೆ, ಇಂದು ಇನ್ನಿಂಗ್ಸ್​ ಆರಂಭಿಸಿರುವ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್​ ದಂಡಿಸುತ್ತಿದ್ದಾರೆ.

55 ಎಸೆತಗಳಲ್ಲಿ ಐದು ಬೌಂಡಿರಿ ನೆರವಿನೊಂದಿಗೆ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 66ನೇ ಅರ್ಧಶತಕ. ಟೆಸ್ಟ್​ನಲ್ಲಿ 29 ಅರ್ಧಶತಕ, ಟಿ-20ಯಲ್ಲಿ 37 ಹಾಗೂ ಐಪಿಎಲ್​ನಲ್ಲಿ 50 ಅರ್ಧಶತಕ ಸಿಡಿಸಿದ್ದಾರೆ.

12 ಬಾರಿ 1,000+ ರನ್

ವಿರಾಟ್ ಕೊಹ್ಲಿ ಈ ವರ್ಷದ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 1,000 ರನ್ ಪೂರೈಸಿ ದಾಖಲೆ ಸೃಷ್ಟಿಸಿದರು. ಈ ಮೂಲಕ ಕ್ರಿಯಾಶೀಲ ಆಟಗಾರರ ಪೈಕಿ 1 ವರ್ಷದಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ಪಾತ್ರರಾದರು.

ಕಳೆದ 15 ವರ್ಷಗಳಲ್ಲಿ ವಿರಾಟ್ ಕೊಹ್ಲಿ ವರ್ಷದಲ್ಲಿ 1,000+ ರನ್ ಗಳಿಸಿದ್ದು ಇದು 12ನೇ ಬಾರಿಯಾಗಿದೆ. ಇನ್ನೂ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (16) ಒಂದೇ ವರ್ಷದಲ್ಲಿ ಅತಿ ಹೆಚ್ಚು ಬಾರಿ 1,000+ ರನ್ ಗಳಿಸಿದ್ದಾರೆ. ಕೊಹ್ಲಿ ಸಚಿನ್ ದಾಖಲೆ ಉಡೀಸ್ ಮಾಡುವ ಸೂಚನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES