Wednesday, October 30, 2024

‘ಪರಶುರಾಮನ ಪ್ರತಿಮೆ’ ನಕಲಿಯಾದರೆ ಸುನಿಲ್ ಕುಮಾರ್ ರಾಜಕೀಯ ನಿವೃತ್ತಿ?

ಉಡುಪಿ : ಉಡುಪಿ ಜಿಲ್ಲೆಯ ಬೈಲೂರು ಉಮಿಕ್ಕಳ್​​ ಬೆಟ್ಟದಲ್ಲಿ ಪರಶುರಾಮನ ಥೀಮ್​ ಪಾರ್ಕ್​​ ನಿರ್ಮಿಸಲಾಗಿದೆ. ಆದರೆ, ಇಲ್ಲಿ ಪ್ರತಿಷ್ಠಾಪಿಸಲಾದ ಪರಶುರಾಮನ ಮೂರ್ತಿ ನಕಲಿ ಎಂಬ ಕೂಗು ಎದ್ದಿದೆ. ಇದೀಗ, ಕಾಂಗ್ರೆಸ್​​ ಮುಖಂಡ ಉದಯ್​​ ಕುಮಾರ್​​ ಶೆಟ್ಟಿ ಪ್ರತಿಮೆ ಕುರಿತು ಶಾಸಕ ಸುನಿಲ್​ ಕುಮಾರ್​​ಗೆ ಸವಾಲ್​ ಹಾಕಿದ್ದಾರೆ.

ಪರಶುರಾಮನನ್ನು ವಿಷ್ಣುವಿನ ಆರನೇ ಅವತಾರವೆಂದು ಭಾವಿಸಲಾಗುತ್ತದೆ. ತುಳುನಾಡಿನ ನಿರ್ಮಾತೃವೆಂದು ಸಹ ನಂಬಲಾಗುತ್ತದೆ. ಈ ಹಿನ್ನೆಲೆ ಜನರ ಒತ್ತಾಯದ ಮೇರೆಗೆ ಪರಶುರಾಮನ ಥೀಮ್​ ಪಾರ್ಕ್​ ನಿರ್ಮಿಸಲಾಗಿದೆ. ಆದರೆ, ಜನಪ್ರತಿನಿಧಿಗಳ ಹಣದಾಹಕ್ಕೆ ಪ್ರತಿಮೆಯನ್ನು ನಕಲಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಪರಶುರಾಮನ ಪ್ರತಿಮೆ ನಕಲಿಯಾದರೇ ಕಾರ್ಕಳ ಶಾಸಕ ಸುನಿಲ್​​ ಕುಮಾರ್​​​​ ರಾಜಕೀಯ ನಿವೃತ್ತಿಯಾಗ್ತಾರೆಯೇ? ಎಂದು ಉದಯ್​​ಕುಮಾರ್​​ ಶೆಟ್ಟಿ ಪ್ರಶ್ನಿಸಿದ್ದಾರೆ.

ಪರಶುರಾಮ ಮೂರ್ತಿ ಅಸಲಿ ಎಂಬುವುದನ್ನು ಶಾಸಕ ಸುನಿಲ್​​ ಕುಮಾರ್​ ಬಹಿರಂಗ ಸಭೆಯಲ್ಲಿ ಸಾಬೀತು ಪಡಿಸಿದರೆ, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಉದಯ್​​ಕುಮಾರ್​ ಶೆಟ್ಟಿ ಹೇಳಿದ್ದಾರೆ. ಮೂರ್ತಿ ನಕಲಿಯಾದಲ್ಲಿ ಸುನಿಲ್​​ ಕುಮಾರ್ ಗೌರವನ್ವಿತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದಲೇ‌ ನಿವೃತ್ತಿ ಹೊಂದಲು ತಯಾರಾಗಿದ್ದಾರೆಯೇ? ಎಂದು ಸವಾಲೆಸೆದಿದ್ದಾರೆ.

ಮೌನಕ್ಕೆ ಶರಣಾದ ಸುನಿಲ್ ಕುಮಾರ್

ಕಾರ್ಕಳ ತಾಲೂಕು ಎರ್ಲಪ್ಪಾಡಿ ಸರ್ವೇ ನಂಬ್​​ 329/1ರಲ್ಲಿ 1.58 ಎಕರೆ ಜಮೀನನ್ನು ಶ್ರೀ ಪರಶುರಾಮ ಥೀಮ್ ಪಾರ್ಕ್​ ನಿರ್ಮಾಣಕ್ಕಾಗಿ ಎರ್ಲಪ್ಪಾಡಿ ಗ್ರಾಮ ಪಂಚಾಯ್ತಿ ಹೆಸರಿನಲ್ಲಿ ಕಾಯ್ದಿರಿಸಲಾಗಿತ್ತು. ಈ ಬಗ್ಗೆ ಉಲ್ಲೇಖ (1) ರಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಆದರೆ ಇದು ಗೋಮಾಳದ ಜಾಗವಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂದಿನ ಇಂಧನ ಸಚಿವರಾಗಿದ್ದ ಸುನಿಲ್ ಕುಮಾರ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈ ಸತ್ಯವನ್ನು ಕ್ಷೇತ್ರದ ನಾಗರಿಕರ ಮುಂದಿಡಲು ಹಿಂಜರಿದಿದ್ದೇಕೆ? ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.‌

ಪ್ರತಿಮೆ ಅಸಲಿಯೋ? ನಕಲಿಯೋ?

ಯಾವುದೇ ಅನುಮೋದನೆ ಇಲ್ಲದೇ ತರಾತುರಿಯಲ್ಲಿ ಚುನಾವಣೆ ದೃಷ್ಠಿಕೋನದಿಂದ ಸುನಿಲ್​ ಕುಮಾರ್​​ ಪರಶುರಾಮ ಥೀಮ್ ಪಾರ್ಕ್​​ ಸ್ಥಾಪನೆ ಮಾಡಿದ್ರು. ಇದೀಗ ಯೋಜನೆಯನ್ನು ನಾನು ಕಾರ್ಯರೂಪಕ್ಕೆ ತಂದಿಲ್ಲವೆಂದು ಸುನಿಲ್​ಕುಮಾರ್​​​​ ಜಾರಿಕೊಳ್ತಿದ್ದಾರೆ ಎನ್ನಲಾಗಿದೆ. ಆದರೆ, ಪರಶುರಾಮನ ಪ್ರತಿಮೆ ಅಸಲಿಯೋ? ನಕಲಿಯೋ ಎಂಬುದನ್ನು ಸಾಬೀತು ಪಡಿಸಬೇಕಾಗಿದೆ. ಸುನಿಲ್​ ಕುಮಾರ್​​ಗೆ​​ ಉದಯ್ ಕುಮಾರ್​ ಶೆಟ್ಟಿ ಹಾಕಿರುವ ಸವಾಲು ಸ್ವೀಕರಿಸುತ್ತಾರೆಯೇ? ಅವರೇ ಉತ್ತರಿಸಬೇಕಾಗಿದೆ.

RELATED ARTICLES

Related Articles

TRENDING ARTICLES