ಬೆಂಗಳೂರು : ನಿಮ್ಮ ಪವರ್ ಟಿವಿ ಮತ್ತೊಂದು ಲಂಚಾವತಾರವನ್ನ ಬಯಲಿಗೆಳೆದಿದ್ದು, ತಾವರೆಕೆರೆ ಪೊಲೀಸರ ಹಣದಾಹವನ್ನ ನಿಮ್ಮ ಮುಂದಿಟ್ಟಿದೆ. ಬಾರ್ ಲೈಸೆನ್ಸ್ ಇದ್ರೂ ಸಹ ತಾವರೆಕೆರೆ ಪೊಲೀಸರಿಗೆ ಮಂತ್ಲಿ 4,000 ಹಣ ಕೊಡಲೇಬೇಕೆಂದು ಬ್ರೋಕರ್ ಒಬ್ಬ ಬಾಯ್ಬಿಟ್ಟಿದ್ದಾನೆ.
ತಾವರೆಕೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಬಾರ್ಗಳಿದ್ದು, ಪ್ರತೀ ತಿಂಗಳು ಪೊಲೀಸರಿಗೆ 4,000 ಹಣ ಕೊಡಲೇಬೇಕು. ಹಣ ಕೊಡಲಿಲ್ಲವೆಂದರೆ ಪ್ರತಿನಿತ್ಯ ಬಾರ್ ಮಾಲೀಕರಿಗೆ ತಾವರೆಕೆರೆ ಪೊಲೀಸರು ಕಾಟ ಕೊಡುತ್ತಾರೆಂದು ಪೊಲೀಸ್ ಸಹಾಯಕ ಬ್ರೋಕರ್ ಅಂಜಿನಪ್ಪ ಬಾಯ್ಬಿಟ್ಟಿದ್ದಾನೆ.
ಇಷ್ಟಕ್ಕೆ ಮುಗಿಯದ ಇವರ ಲಂಚಬಾಕತನ, ರಸ್ತೆಯಲ್ಲಿ ಸಿಕ್ಕ ಸಿಕ್ಕ ವಾಹನಕ್ಕೂ ಕೈ ಅಡ್ಡ ಹಾಕಿ ಅವರ ಬಳಿಯೂ ಲಂಚ ಪೀಕುತ್ತಾರೆ. ಒಬ್ಬರಿಂದ ಸಾವಿರಗಟ್ಟಲೇ ಲಂಚ ಪಡೆಯುವ ಇವರು, ಕೊಡದಿದ್ದರೆ ಹೆದರಿಸುತ್ತಾರೆ. ತಾವರೆಕೆರೆ ಪೊಲೀಸ್ ಠಾಣೆಯ ASI ಅರುಣ್ ಕುಮಾರ್ ಲಂಚಬಾಕತನದ ಮುಖವಾಡ ಪವರ್ ಸ್ಟಿಂಗ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
5,000 ಹಣವನ್ನ ವಸೂಲಿ
ಕುಡಿಯದೇ ಆಟೋ ಓಡಿಸುತ್ತಿದ್ದ ಚಾಲಕನನ್ನ ತಡೆದು ಕುಡಿದಿದ್ದೀಯಾ ಎಂದು ಬೆದರಿಸಿ ತನ್ನ ಪೊಲೀಸ್ ಸಹಾಯಕ ಆಂಜಿನಪ್ಪ ಮೂಲಕ 5,000 ಹಣವನ್ನ ವಸೂಲಿ ಮಾಡುತ್ತಾರೆ. ಅರುಣ್ ಕುಮಾರ್ ಜೊತೆ ವ್ಯವಹರಿಸೋ, ಜನರಿಂದ ವಸೂಲಿ ಮಾಡೋ ಆಂಜಿನಪ್ಪನ ದಂಧೆ ಪವರ್ ಸ್ಟಿಂಗ್ನಲ್ಲಿ ಸೆರೆಯಾಗಿದೆ.