Sunday, January 19, 2025

ರಸ್ತೆ ಬಿಟ್ಟು ಗದ್ದೆಗೆ ನುಗ್ಗಿದ ಕಾರು ; ವೈದ್ಯರು ಮತ್ತು ಸಿಬ್ಬಂದಿ ಬಚಾವ್

ರಾಯಚೂರು : ಚಾಲಕನ ನಿರ್ಲಕ್ಷದಿಂದ ನಿಯಂತ್ರಣ ತಪ್ಪಿ ಕಾರು ಭತ್ತದ ಗದ್ದೆಗೆ ನುಗ್ಗಿ ಪಲ್ಟಿಯಾಗಿರುವ ಘಟನೆ ಮಣಿಕೇರಿ ಕ್ಯಾಂಪ್​ನ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ನಡೆದಿದೆ.

ತಾಲೂಕಿನ ರಾಗಲಪರ್ವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ದಿಗ್ವಿಜಯ ಹಾಗೂ ಲ್ಯಾಬ್ ಟೆಕ್ನಿಷಿಯನ್ ಶಂಭುಲಿಂಗಯ್ಯ ಎಂಬುವವರು ಕಾರಿನಲ್ಲಿ ಸಿಂಧನೂರು ಮಾರ್ಗವಾಗಿ ರಾಗಲಪರ್ವಿಗೆ ತೆರಳುತ್ತಿದ್ದರು. ಈ ವೇಳೆ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಹಿನ್ನೆಲೆ ಮಣಿಕೇರಿ ಕ್ಯಾಂಪ್​ನ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಕಾರು ಪಲ್ಟಿಯಾಗಿ ಭತ್ತದ ಗದ್ದೆಗೆ ಉರುಳಿದೆ.

ಇದನ್ನು ಓದಿ : ಬೈಕ್, ಟ್ಯಾಂಕರ್ ಡಿಕ್ಕಿ ; ಇಬ್ಬರು ಗಂಭೀರ ಗಾಯ

ಕಾರು ಚಲಾಯಿಸುತ್ತಿದ್ದ ಚಾಲಕನ ನಿರ್ಲಕ್ಷದಿಂದ ಈ ಅವಘಡ ನಡೆದು ಹೋಗಿದೆ. ಅದೃಷ್ಟವಶಾತ್ ಸದ್ಯ ಅಲ್ಲೇ ಇದ್ದ ಸಾರ್ವಜನಿಕರು ಕಾರಿನಿಂದ ವೈದ್ಯ ಮತ್ತು ಅವರ ಸಿಬ್ಬಂದಿಯನ್ನು ಹೊರ ತೆಗೆದರು.

ಬಳಿಕ ಘಟನಾ ಸ್ಥಳಕ್ಕೆ ವೈದ್ಯರ ಸಂಬಂಧಿಕರು ಬಂದಿದ್ದು, ಬೇರೆ ಕಾರಿನಲ್ಲಿ ಸಿಂಧನೂರು ನಗರಕ್ಕೆ ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.

RELATED ARTICLES

Related Articles

TRENDING ARTICLES